ಗುಳೇಗುಡ್ಡ

ವೈಜಾನಿಕ ಮನೋಭಾವನೆ ಅಗತ್ಯ: ಉಮರಾಣಿ

ವೈಜಾನಿಕ ಮನೋಭಾವನೆ ಅಗತ್ಯ: ಉಮರಾಣಿ

ಗುಳೇದಗುಡ್ಡ 17:  ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಕಠಿಣವೆಂದು ತಿಳಿದುಕೊಳ್ಳದೆ, ಭಯಬಿಟ್ಟು ಹೊಸ ಆಲೋಚನೆಯಿಂದ ಅಧ್ಯಯನ ಮಾಡಲು ವೈಜ್ಞಾನಿಕ ಮನೋಭಾವನೆ ಅಗತ್ಯವೆಂದು ಅಂತರಾಷ್ಟ್ರೀಯ ವಿಜ್ಞಾನ ಮತ್ತು ಗಣಿತ ತರಬೇತುದಾರ ಬೆಂಗಳೂರಿನ ಬಸವರಾಜ ಉಮರಾಣಿ ಹೇಳಿದರು.ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಜರುಗಿದ ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ  ಗಣಿತ ಮತ್ತು ವಿಜ್ಞಾನ ವಿಷಯದ ಹಲವು ಕೂತುಹಲಕಾರಿ ಸಂಗತಿಗಳನ್ನು ವಿವರಿಸುತ್ತ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಹುಟ್ಟಿದ ದಿನಾಂಕವನ್ನು ಕೇಳಿ ಹುಟ್ಟಿದ ದಿನವನ್ನು ತಕ್ಷಣವೇ ಹೇಳಿದರು. ಕ್ಯಾಲೆಂಡರ್‍ನಲ್ಲಿ ತಿಂಗಳು ಅದರಲ್ಲಿನ ದಿನಾಂಕ ಮತ್ತು ವಾರಗಳ ರಚನೆ ಮತ್ತು ಪುನರಾವರ್ತನೆಯಾಗುವ ಬಗೆಗಳ ಕುರಿತು ಹೇಳಿ ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಆದರ್ಶಗಳನ್ನು ರೂಡಿಸಿಕೊಳ್ಳಬೇಕೆಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪಿ.ಬಿ.ಜೇವೂರ ಮಾತನಾಡಿ, ನಾವೆಲ್ಲ ದೈಹಿಕ ಮತ್ತು ಮಾನಸಿಕವಾಗಿ ಸರಿ ಇದ್ದರೂ ಏನನ್ನು ಸಾಧಿಸಲು ಆಗುವುದಿಲ್ಲ. ಎರಡು ಕಣ್ಣುಗಳಿಲ್ಲದೆ ಅಂದರಾಗಿದ್ದರೂ 6 ಸಾವಿರಕ್ಕೂ ಅಧಿಕ ಉಪನ್ಯಾಸ ನೀಡಿ ದೂರದಶರ್Àನಗಳಲ್ಲಿ ಬಹಳ ಕಾರ್ಯಕ್ರಮ ನೀಡಿ ವ್ಯಕ್ತಿತ್ವವಿಕಾಸಕ್ಕೆ ಮಾರ್ಗದರ್ಶನ ಮಾಡುವ ಬಸವರಾಜ ಉಮಾರಾಣಿ ಯವರ ಕಾರ್ಯ ಶ್ಲಾಘನಿಯವಾಗಿದೆ ಎಂದರು.   ಕಾಲೇಜಿನ ಉಪನ್ಯಾಸಕ ಎಸ್.ಬಿ.ಸೂಳಿಭಾವಿ, ಎಸ್.ವಿ.ಮೋರಟಗಿ, ಜಿ.ಐ.ಬಣಗಾರ, ವಿ.ವಿ.ಸಜ್ಜನ, ಎಸ್.ಬಿ.ಗುಡಿಹಿಂದಿನ, ಎಂ.ಎಸ್.ಜಕ್ಕನ್ನವರ, ಮೇಟಿ ಹಾಗೂ ಕಳ್ಳಿಗುಡ್ಡ  ಉಪಸ್ಥಿತದ್ದರು.



ಸುದ್ದಿ ಓದಿ