ಕಾಗವಾಡ

ತಂಗಡಿಯಲ್ಲಿ ವಿಶೇಷವಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ತಂಗಡಿಯಲ್ಲಿ ವಿಶೇಷವಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಕಾಗವಾಡ 16: ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತಂಗಡಿಯಲ್ಲಿ ಸನ್ 2022 - 2023 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಹಳ್ಳಿಯ ಸೊಗಡಿನ ಎತ್ತಿನ ಬಂಡಿಯನ್ನು ಅಕ್ಷರ ಬಂಡಿಯನ್ನಾಗಿ ಸಿಂಗರಿಸುವ ಮೂಲಕ ವಿಶೇಷವಾಗಿ ಜರಗಿತು.

ಮಕ್ಕಳಿಗೆ ಬಲೂನ್ ಹಾಗೂ ಪುಷ್ಪ ನೀಡುವದರ ಮೂಲಕ ಶಾಲೆಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅವರು ಸ್ವಾಗತ ಮಾಡಿಕೊಂಡರು.

ಅಕ್ಷರ ಬಂಡಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮಕ್ಕಳನ್ನು ಶಾಲೆಗೆ ಕಳುವಹಿಸುವಂತೆ ಪಾಲಕ ಪೋಷಕರಲ್ಲಿ ಜಾಗೃತಿ ಮೂಡಿಸಲಾಯಿತು.

ಎಲ್ಲ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಸಿಹಿ ಉಟವನ್ನು ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವನ್ನು ಅದ್ದೂರಿಯಾಗಿ ಪ್ರಾರಂಭಿಸಲಾಯಿತು.

ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಕಾಗವಾಡ ತಾಲೂಕಾಧ್ಯಕ್ಷರು, ಶಾಲೆಯ ಪ್ರಧಾನ ಗುರುಗಳಾದ ಗೌಡಪ್ಪ ಸಡ್ಡಿ, ಎಚ್ಡಿಎಂಸಿ ಅಧ್ಯಕ್ಷರಾದ ಬಾಬು ನದಾಫ, ಶಾಹಜಾನ ಮುಲ್ಲಾ, ಶಿಕ್ಷಕರಾದ ಎಮ್.ವಾಯ್,ಪೂಜಾರಿ, ಕೆ.ಬಿ.ರಾವುತ, ಕಿರಣ ಚಂದಾವರ, ಪಿ.ಎ.ಗೇಂಡ, ಉಷಾ ಕಾಂಬಳೆ, ಅಶ್ವಿನಿ ಪೂಜಾರಿ, ಸುಜಾತಾ ಕಲ್ಯಾಣಿ ಇನ್ನೂಳಿದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಭಾಗವಹಿಸಿದ್ದರು

ಸುದ್ದಿ ಓದಿ