ರಾಣೆಬೆನ್ನೂರ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ರಾಣಿಬೆನ್ನೂರ:-5 ಭೂಮಿಯ ಮೇಲಿರುವ ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರಕೃತಿಯೇ ಆಶ್ರಯತಾಣವಾಗಿದೆ. ನಮಗೆಲ್ಲರಿಗೂ ವಾಸಿಸಲು ಇರುವುದು ಒಂದೇ ಭೂಮಿಯಾಗಿದ್ದು ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಭವಿಷ್ಯಕ್ಕೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ  ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕೆ.  ಪ್ರಕಾಶರಾವ ಹೇಳಿದರು. 

ತಾಲೂಕಿನ ಕೋಡಿಯಾಲ ಗ್ರಾಮದ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾರಣೆಯಲ್ಲಿ ಮಾತನಾಡಿದ ಅವರು, ಭೂಮಿಯೆಲ್ಲೆಡೆ ಅತಿ ಹೆಚ್ಚು ಸಾಧ್ಯವಾದಷ್ಟು ಹಚ್ಚ ಹಸಿರಾಗಿರುವಂತೆ ಮಾಡುವುದು. ಚಿಕ್ಕಚಿಕ್ಕ ಕೈತೋಟ, ಉದ್ಯಾನವನಗಳನ್ನು ನಿರ್ಮಿಸುವುದು, ನಮ್ಮ ಸುತ್ತಲು ಇರುವಂತಹ ನೀರಿನ ಮೂಲಗಳಾದ ನದಿ, ಕೆರೆ, ಬಾವಿಗಳನ್ನು ಸ್ಚಚ್ಛಗೊಳಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು. ತ್ಯಾಜ್ಯ ವಸ್ತುಗಳ ಸರಿಯಾದ ವಿಲೇವಾರಿ ಮಾಡುವುದು. ನೀರನ್ನು ಹಿತಮಿತವಾಗಿ ಬಳಸಬೇಕು ಎಂದರು.  

ಈ ಸಂದರ್ಭದಲ್ಲಿ  ಮಕ್ಕಳು 350ಕ್ಕೂ ಹೆಚ್ಚು ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು. ಪಾಲಕರು ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳುಇದ್ದರು. 


ಸುದ್ದಿ ಓದಿ