ಕಾಗವಾಡ

ಅತಿಯಾದ ವಾಹನ ಬಳಕೆಯಿಂದ ಪರಿಸರದ ಮಾಲಿನ್ಯ: ಪ್ರೊ. ಜೆ.ಕೆ.ಪಾಟೀಲ

ಅತಿಯಾದ ವಾಹನ ಬಳಕೆಯಿಂದ ಪರಿಸರದ ಮಾಲಿನ್ಯ: ಪ್ರೊ. ಜೆ.ಕೆ.ಪಾಟೀಲ

ಕಾಗವಾಡ 28: ಅತಿಯಾದ ವಾಹನ ಬಳಕೆಯಿಂದ ಜಾಗತಿಕ ಮಟ್ಟದಲ್ಲಿ ಪರಿಸರದ ಮಾಲಿನ್ಯ ಹೆಚ್ಚಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಇದರ ಭೀಕರತೆ ಕುರಿತು ಎಲ್ಲರೂ ಜಾಗ್ರತರಾಗಬೇಕಾಗಿದೆಂದು ಪ್ರೊ. ಜೆ.ಕೆ. ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಅವರು ಶನಿವಾರ ದಿ. 28ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಎನ್‌ಎಸ್‌ಎಸ್, ವೈಆರ್‌ಸಿ, ಇಕೊ ಕ್ಲಬ್ ಮತ್ತು ಕರಿಯರ್ ಅಕ್ಯಾಡಮಿ ಕೋಶಗಳ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಿದ್ದ ವೆಹಿಕಲ್ ಮುಕ್ತ ದಿನಾಚರಣೆಯಲ್ಲಿ  ಮಾತನಾಡುತ್ತಿದ್ದರು. 

ಅಧ್ಯಕ್ಷತೆ ವಹಿಸಿದ್ದ ಡಾ.ಎಸ್‌.ಎ. ಕರ್ಕಿ ಮಾತನಾಡಿ, ಇಂದಿನ ಹವಾಮಾನ ವೈಪರಿತ್ಯ ಹಾಗೂ ಜಾಗತೀಕ ತಾಪಮಾನಕ್ಕೆ ಮಾನವನ ಮಿತಿಮೀರಿದ ದುರಾಸೆಯೇ ಕಾರಣ ಎಂಬುದಾಗಿ ಆತಂಕ ವ್ಯಕ್ತಪಡಿಸಿದರು. ಪರಿಸರದ ಉಳಿವಿನಲ್ಲಿ ನಾಗರಿಕ ಸಮಾಜದ ಪಾತ್ರ ಮುಖ್ಯ. ಅದರಲ್ಲೂ ಯುವ ವಿದ್ಯಾರ್ಥಿ ಸಮೂಹದ ಹೊಣೆಗಾರಿಕೆ ನಿರಂತರವಾಗಿರಬೇಕೆಂದು ಆಶಯ ವ್ಯಕ್ತ ಪಡಿಸಿದರು. 

ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಡಿ. ಧಾಮಣ್ಣವರ, ವೈಆರ್‌ಸಿ ಘಟಕದ ಡಾ. ಎ.ಟಿ. ಪಾಟೀಲ, ಕರಿಯರ್ ಅಕ್ಯಾಡಮಿ ಕೋಶದ ಡಾ.ಚಂದ್ರಶೇಖರ ವೈ., ಪ್ರೊ. ಪಿ.ಎಸ್‌. ಪಟ್ಟಣಶೆಟ್ಟಿ ಸೇರಿದಂತೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಬೋಧಕ ಸಿಬ್ಬಂದಿಯವರು ಉಪಸ್ಥಿತರಿದ್ದರು. 


ಸುದ್ದಿ ಓದಿ