ಶಿಗ್ಗಾವ್

ಪರಿಸರ ಸ್ವಚ್ಚತೆ ಪ್ರತಿಯೊಬ್ಬ ನಾಗರಿಕರ ಜವಾಬ್ಧಾರಿ : ಶೈಲಜಾ ಪಾಟೀಲ

ಪರಿಸರ ಸ್ವಚ್ಚತೆ ಪ್ರತಿಯೊಬ್ಬ ನಾಗರಿಕರ ಜವಾಬ್ಧಾರಿ : ಶೈಲಜಾ ಪಾಟೀಲ

ಶಿಗ್ಗಾವಿ 26: ಭೂಮಿಯ ಮೇಲೆ ಬದುಕುವ ಪ್ರತಿಯೊಬ್ಬರಿಗೂ ಪರಿಸರ ನೈಸರ್ಗಿಕವಾಗಿ ಜೀವಿಸುವ ಶಕ್ತಿಯನ್ನು ನೀಡಿದೆ ಎಂದು ಶಿಗ್ಗಾಂವ ಪುರಸಭೆಯ ಸಮುದಾಯ ಸಂಘಟಕಿ  ಶೈಲಜಾ ಪಾಟೀಲ ಹೇಳಿದರು. 

ನಗರದಲ್ಲಿ ಸ್ವಚ್ಚತಾ ಮತ್ತು ಸೇವಾ ಅಭಿಯಾನ ಅಡಿಯಲ್ಲಿ ಪುರಸಭೆ ಕಾರ್ಯಾಲಯ ಶಿಗ್ಗಾಂವ ಹಾಗೂ ಅಸ್ರ್ತಾ ಪೌಂಢೇಶನ್(ರಿ) ವತಿಯಿಂದ ಶಿಗ್ಗಾಂವ ನಗರದ ರಾಚನಕಟ್ಟೆಯ ಕೆರೆಯ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ನಮ್ಮ ಕರ್ತವ್ಯವನ್ನು ಜವಾಬ್ಧಾರಿಯುತವಾಗಿ ನಿರ್ವಹಿಸಿದಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ನಮ್ಮ ಕರ್ತವ್ಯದಲ್ಲಿ ಲೋಪವಾದರೆ ನಮಗೂ ಮತ್ತು ಸಮಾಜಕ್ಕೆ ನಷ್ಟವಾಗುತ್ತದೆ ಅದೇ ರೀತಿಯಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ವ್ಯತ್ಯಾಸವಾದರೆ ಪರಿಸರದಲ್ಲಿ ಏರು ಪೇರಾಗುತ್ತದೆ ಅಷ್ಟೆ ಅಲ್ಲದೆ ಆರೋಗ್ಯ ಹದಗೆಡುವ ಸಂಭವವಿರುತ್ತದೆ ಹಾಗಾಗಿ ಇಂದು ನಗರದ ಮಧ್ಯಭಾಗದಲ್ಲಿರುವ ರಾಚನಕಟ್ಟೆ ಕೆರೆಯಲ್ಲಿ ಇಂಡಿಯನ್ ಸ್ವಚ್ಚತಾ ಲೀಗ್ 2.ಓ ಎಂಬ ಯೋಜನೆಯ ಅಡಿಯಲ್ಲಿ ಎರಡು ಸಂಸ್ಥೆಗಳು ಸೇರಿ ಸ್ವಚ್ಚತಾ ಕಾರ್ಯ ಕೈಗೊಂಡಿರುವುದು ಸಂತೋಷ ತಂದಿದೆ ಎಂದರು. 

ಪರಿಸರ ಸ್ವಚ್ಚತೆಯ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಶ್ರಮ ನಿಜಕ್ಕೂ ಶ್ಲಾಘನೀಯ ಅವರು ಪರಿಸರ ಸ್ವಚ್ಚಗೊಳಿಸದೆ ಹೋದರೆ ನಾವು ಹೊರಗೆ ಹೋಗುವುದು ಕಷ್ಟ ಅಂತವರನ್ನು ಗೌರವಿಸಬೇಕು ಎಂದರು. 

ಅಸ್ರ್ತಾ ಪೌಂಢೇಶನ್ ಅಧ್ಯಕ್ಷ ಸಮಾಜ ಸೇವಕ ಪ್ರೀತಮ್ ಭಾಯರ ಮಾತನಾಡಿ ಭೂಮಿಯ ಮೇಲೆ ಜೀವಂತವಾಗಿ ಇರುವವರೆಗೂ ನಾವು ಏನಾದರೂ ಒಳ್ಳೆಯ ಕಾರ್ಯ ಮಾಡಬೇಕು ಅದಕ್ಕಾಗಿ ನಾನು ಶಿಗ್ಗಾಂವ ನಗರದ ಮಧ್ಯಭಾಗದಲ್ಲಿರುವ ಕೆರೆಯನ್ನು ನೋಡುತ್ತಿದ್ದೆ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿರುವುದರಿಂದ ಪುರಸಭೆ ಹಾಗೂ ನಮ್ಮ ಸಂಸ್ಥೆಯ ವತಿಯಿಂದ  ಸ್ವಚ್ಚತೆಯನ್ನು ಕೈಗೊಂಡರೆ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ನೀರೀಕ್ಷಕ ಆಂಜನಪ್ಪ ಹಾಗೂ ಅಸ್ರ್ತಾ ಪೌಂಢೇಶನ್(ರಿ) ಸಂಸ್ಥೆಯ ಸದಸ್ಯರು ಹಾಜರಿದ್ದರು. 


ಸುದ್ದಿ ಓದಿ