ಗುಳೇಗುಡ್ಡ

ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲಕ್ಕೆ ಲಾಭವಿದೆ: ಎಸ್‌.ಜಿ.ಮೇಟಿ

ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲಕ್ಕೆ ಲಾಭವಿದೆ: ಎಸ್‌.ಜಿ.ಮೇಟಿ
ಪರ್ವತಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕೂಡಿ ಶಾಲೆಯ ಆವರಣದಲ್ಲಿ ನೂರಾರ

ಗುಳೇದಗುಡ್ಡ27:  ಯಾಂತ್ರಿಕೃತ ಜಗತ್ತಿನಲ್ಲಿ ಮಾನವ ಪರಿಸರರದ ಮಹತ್ವವನ್ನು ಕಡೆಗಣಿಸುತ್ತಿದ್ದಾನೆ. ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲಕ್ಕೆ ಲಾಭವಿದೆ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ  ಎಸ್‌.ಜಿ.ಮೇಟಿ ಹೇಳಿದರು. 

ಅವರು ತಾಲೂಕಿನ ಪರ್ವತಿ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಸುಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ  ಹಮ್ಮಿಕೊಂಡಿದ್ದ  ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಪರಿಸರ ಸಂರಕ್ಷಣೆ ಮಾಡುವುದರಿಂದ ಇಡೀ ಮನುಕುಲಕ್ಕೆ ಲಾಭವಾಗಲಿದೆ. ಇಂದು ಮನುಷ್ಯ ತನ್ನ ಭೌತಿಕ ಸ್ವಾಮಿತ್ವವನ್ನು ವಿಸ್ತರಿಸುವ ಭರದಲ್ಲಿ ಪರಿಸರದ ಮೇಲಿನ ಕಾಳಜಿ ಕಡಿಮೆ ಮಾಡಿಕೊಂಡಿದ್ದಾನೆ. ಇದು ಅಪಾಯಕಾರಕ ಮುನ್ಸೂಚನೆಯೇ ಆಗಿದೆ. ಕಾರಣ ಪ್ರತಿಯೊಬ್ಬರೂ ಪರಿಸರ ಕಾಳಜಿಗೆ ಮಹತ್ವ ನೀಡಿ ತಮ್ಮ ತಮ್ಮ ಮನೆಗಳ ಸುತ್ತಲೂ ಸಸಿಗಳನ್ನು ನೆಡುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಹೇಳಿದರು. 

ಶಾಲೆಯ ಶಿಕ್ಷಕ ವರ್ಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕೂಡಿ ಶಾಲೆಯ ಆವರಣದಲ್ಲಿ ನೂರಾರು ಸಸಿಗಳನ್ನು ನೆಟ್ಟರು. 

ಈ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಕಾಡಿತು. ಇದಕ್ಕೆ ಪರಿಸರದ ಹಾನಿಯೇ ಕಾರಣ. ಹಾಗಾಗಿ ಪ್ರತಿಯೊಬ್ಬರೂ ಗಿಡ, ಮರಗಳನ್ನು ಬೆಳೆಸುವ, ನಮ್ಮ ಸುತ್ತಮುತ್ತಲು ಅರಣ್ಯ ನಿರ್ಮಿಸಿ ಅದನ್ನು ಸಂರಕ್ಷಿಸುವ ಕಾರ್ಯ ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಹಿರೇಮಠ ಹೇಳಿದರು.  

ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಸ್‌.ಎಸ್‌.ಪಟ್ಟಣಶೆಟ್ಟಿ, ಶಿಕ್ಷಕ ಆರ್‌.ಎಂ.ನಿಲುಗಲ್ಲ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕಿ ಮಂಜುಳಾ ಪಾಟೀಲ, ಸೇವಾ ಪ್ರತಿನಿಧಿ ಮಲ್ಲಮ್ಮ ಪೂಜಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸುದ್ದಿ ಓದಿ