ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಮೋಮಿನ
ಗುಳೇದಗುಡ್ಡ,ಜು.5: ಮಾನವನ ಸ್ವಾರ್ಥದಿಂದ ಪರಿಸರ ಅಸಮತೋಲನವಾಗಿ ಹಲವಾರು ಸಮಸ್ಯೆಗಳನ್ನು ಜಗತ್ತು ಇಂದು ಎದುರಿಸುತ್ತಿದೆ. ಸಮತೋಲಿತ ಪರಿಸರ ನಿರ್ಮಿಸುವ ಹೊಣೆ ಹಾಗೂ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ ಎಂದು ಶ್ರೀ ಗುರುಸಿದ್ದೇಶ್ವರ ಮಹಿಳಾ ಬಿಇಡಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪಿ.ಆಯ್.ಮೋಮಿನ ಹೇಳಿದರು.
ಶನಿವಾರ ಕಾಲೇಜು ಆವರಣದಲ್ಲಿ 50 ಕ್ಕೂ ಹೆಚ್ಚು ಸಸಿ ನೆಡುವ ಮೂಲಕ ಹಸಿರೋತ್ಸವ ಆಚರಣೆ ಮಾಡಿ ಮಾತನಾಡಿ, ಶುದ್ಧ ಪರಿಸರದ ಅಗತ್ಯತೆ ಇಂದು ತುಣಬಾ ಇದೆ. ಎಲ್ಲರೂ ತಮ್ಮ ಮನೆಯ ವಠಾರ, ಮನೆಯ ಸುತ್ತ,ಮುತ್ತ ಹಾಗೂ ಶಾಲಾ ಪರಿಸರದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಶಿಕ್ಷಕ ತರಬೇತಿ ಮುಗಿದ ಮೇಲೆ ತಾವು ಕೆಲಸ ಮಾಡುವ ಶಾಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಿಸಬೇಕು. ಎಲ್ಲ ವಿದ್ಯಾರ್ಥಿಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮನೋಧೋರಣೆ ಬೆಳೆಯಬೇಕೆಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಸ್.ಟಿ.ಕತ್ತಿ. ಡಾ.ಎಚ್.ಎಸ್.ಘಂಟಿ, ಬಿ.ಎ.ನದಾಫ್, ಎಸ್.ಸಿ.ಗದ್ದಿಗೌಡರ್ ಹಾಗೂ ವ್ಹಿ.ಕೆ.ಬದಿ ಹಾಜರಿದ್ದರು.