ಬೈಲಹೊಂಗಲ

ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಗ್ಗಟ್ಟುಗಳು ಬಂದ್

ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಗ್ಗಟ್ಟುಗಳು ಬಂದ್
ಬೈಲಹೊಂಗಲ ಬಜಾರ ರಸ್ತೆಯ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಗ್ಗಟ್ಟುಗಳು ಬಂದ್ ಮಾಡಿದರು.

ಬೈಲಹೊಂಗಲ 25:  ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟಲು ಹಾಗೂ ನಾಗರೀಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶನಿವಾರ ವಿಕೆಂಡ್ ಕರ​‍್್ಯೂ ವಿಧಿಸಿದ  ಹಿನ್ನೆಲೆಯಲ್ಲಿ ಬೈಲಹೊಂಗಲ ಪಟ್ಟಣದ ಸೇರಿದಂತೆ ತಾಲೂಕು ಸಂಪೂರ್ಣ ಸ್ಥಬ್ದವಾಯಿತು. 

ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಬೆಂಬಲಿ ಸೂಚಿಸಿದರೆ ಪ್ರತಿಯೊಂದು ಬೀದಿಗಳ ನಿವಾಸಿಗಳು ಮನೆ ಬಿಟ್ಟು ಹೊರಗೆ ಬಾರದೆ ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು. ಜನರಿಲ್ಲದೆ  ಬೀದಿಗಳು, ರಸ್ತೆಗಳು ಬಿಕೋ ಎಂದವು. 

ಕೇಂದ್ರ ಬಸ್ ನಿಲ್ದಾಣ, ಖಾಸಗಿ ವಾಹನಗಳ ನಿಲ್ದಾಣಗಳಲ್ಲಿ ಮಾತ್ರ ಬಸ್ ಎಂದಿನಂತೆ ಓಡಿಡಾಡಿದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರಲಿಲ್ಲ. ಸಾರ್ವಜನಿಕ ಆಸ್ಪತ್ರೆ, ಖಾಸಗಿ ಆಸ್ಪತ್ರೆ ತೆರೆದಿದ್ದವು. ಪೋಲಿಸರು ಪ್ರಮುಖ ರಸ್ತೆಗಳ ಮೂಲಕ ಲಾಕ್ ಡೌನ ಸ್ಥಿತಿಗತಿಗಳ ಅವಲೋಕನ ಮಾಡಿದರು. ಪೋಲಿಸರು, ಪುರಸಭೆ ಸಿಬ್ಬಂದಿ ಲಾಠಿ ಹಿಡಿದು ಪಟ್ಟಣದಲ್ಲಿಯ ತೆರೆದ ಅಂಗಡಿಯವರಿಗೆ ಬಿಸಿ ಮುಟ್ಟಿಸಿದರು. 

ಬೆಳಗ್ಗೆ 10 ಗಂಟೆಯವರೆಗೆ ತರಕಾರಿ, ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ದಿನನಿತ್ಯ ತುಂಬಿ ತುಳುಕುತ್ತಿದ್ದ ಚನ್ನಮ್ಮ ಸರ್ಕಲ್, ರಾಯಣ್ಣ ಸರ್ಕಲ್ ಮೊದಲಾದೆಡೆ ಜನರು ಇಲ್ಲದೆ ಬೀಕೊ ಎನ್ನುತ್ತಿತ್ತು. ಜನರು ಸರಕಾರದ ನಿರ್ಧಾರಕ್ಕೆ ಸಹಕಾರ ನೀಡುತ್ತಿದ್ದಾರೆ. ಪ್ರತಿ ಗಲ್ಲಿಯ ನಿವಾಸಿಗಳು ಮನೆ ಬಿಟ್ಟು ಹೊರಗೆ ಬಾರದೆ ಬೆಂಬಲ ನೀಡಿದರು. ಹಿರಿಯರು, ಗೃಹಿಣಿಯರು, ಮಕ್ಕಳು, ಯುವಕರು, ಯುವತಿಯರು ಮನೆಯಲ್ಲಿಯೇ ಕಾಲ ಕಳೆದರು. 

ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿ  ಮಹಾಮಾರಿ ಕರೋನಾ ವೈರಸ್ ಹರಡುವ ಮುಂಜಾಗ್ರತಾ ಕ್ರಮವಾಗಿ ಎಲ್ಲ ಬಸ್‌ಗಳನ್ನು ಕ್ರೀಮಿನಾಶಕ ಸಿಂಪಡಿಸಿ ಶುಚಿಗೊಳಿಸಿದರು. 



ಸುದ್ದಿ ಓದಿ