ಕಾಗವಾಡ

ಪದವೀಧರ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ

ಪದವೀಧರ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ

ಕಾಗವಾಡ 31: ಪದವಿಧರ ಮತದಾರ ಪಟ್ಟಿ ಕೊನೆಗೊಳಿಸಲಾಗುತ್ತಿದ್ದು, ಬರುವ ನವ್ಹೆಂಬರ್ 6ರ ವರೆಗೆ ಅರ್ಜಿ ನಮೂನೆ 18 ಮತ್ತು 19ರಲ್ಲಿ ಹೆಸರು ನೊಂದಾಯಿಸಿ ಪದವಿಧರ ಯುವಕರು ತಹಶೀಲ್ದಾರ ಕಚೇರಿಗೆ ಸಲ್ಲಿಸಬೇಕೆಂದು ಕಾಗವಾಡ ತಹಶೀಲ್ದಾರ ರಾಜೇಶ ಬುರಲಿ ಮನವಿ ಮುಖಾಂತರ ಅಹ್ವಾನಿಸಿದ್ದಾರೆ. 

ಕರ್ನಾಟಕ ವಿಧಾನಪರಿಷತ್ತಿನ ವಾಯವ್ಯ ಪದವಿಧರರ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ 2022ರ ಮತದಾರ ಪಟ್ಟಿ ತಯಾರಿಕೆ ಕುರಿತು ಭಾರತ ಚುನಾವಣಾ ಆಯೋಗ ಆದೇಶದನ್ವಯ ದಿ. 01/11/2018ರ ಕ್ಕಿಂತ ಮುಂಚಿತವಾಗಿ ಪದವಿ ಅರ್ಹತಾ ದಿನಾಂಕವನ್ನಾಧರಿಸಿ ಮತದಾರರ ಪಟ್ಟಿಯನ್ನು ತಯಾರಿಸಲು ನಿದೇರ್ಶನಗಳನ್ನು ನೀಡಿದಂತೆ ಕಾಗವಾಡ ತಾಲೂಕಿನ ಅರ್ಹ ಪದವಿಧರರು ನ. 06ರ ಒಳಗಡೆ ತಹಶೀಲ್ದಾರರ ಕಚೇರಿ, ಕಾಗವಾಡದಲ್ಲಿ ಅರ್ಜಿ ನಮೂನೆ ನಂ. 18 ಹಾಗೂ 19 ಸಲ್ಲಿಸಲು ತಹಶೀಲ್ದಾರ ರಾಜೇಶ ಬುರಲಿ ಅಹ್ವಾನಿಸಿದ್ದಾರೆ. 


ಸುದ್ದಿ ಓದಿ