ಇಂಡಿ

ಮನೆ ಮನೆಗೆ ತೆರಳಿ ವಿಶೇಷವಾಗಿ ಮಕ್ಕಳ ದಾಖಲಾತಿ

ಮನೆ ಮನೆಗೆ ತೆರಳಿ ವಿಶೇಷವಾಗಿ ಮಕ್ಕಳ ದಾಖಲಾತಿ

ಇಂಡಿ 04: ಪಟ್ಟಣದ ಅಂಬೇಡ್ಕರ ವೃತ್ತದಲ್ಲಿರುವ  ಕೆಜಿಎಸ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಂದ “ಅಕ್ಷರ ಜ್ಯೋತಿ ಹೊತ್ತಿಸಿರಿ ಅದಕ್ಕೆ ಪಾಲಕರು ಹಣತೆ, ಬತ್ತಿ ಮತ್ತು ಎಣ್ಣೆಯಾಗಿರಿ” ಹಾಗೂ “ಶಿಕ್ಷಣ ಕೊಡಿಸಿರಿ ಮಕ್ಕಳ ಬಾಳು ಬೆಳಗಿಸಿರಿ” ಎನ್ನುವ ಉದ್ಘೋಷಗಳೊಂದಿಗೆ, ಪೂರ್ಣಕುಂಭ, ಆರತಿ ಹಾಗೂ ಸಕಲ ವಾದ್ಯ-ವೈಭವಗಳೊಂದಿಗೆ ಜೂನ 4 ರಂದು ಎರಡನೆ ಬಾರಿಗೆ ನಗರದ ವಿವಿಧ ಬಡವಣೆಗಳಲ್ಲಿ ಪ್ರಭಾತಪೇರಿ ನಡೆಸಿದರು.  

ಪಟ್ಟಣದ ಹಳ್ಳದ ಓಣಿ, ಪೂಜಾರಿ ಓಣಿ, ಶಾಂತೇಶ್ವರ ಓಣಿ, ಕುಂಬಾರ ಓಣಿ, ಚವಡಿ ಓಣಿ, ದರ್ಗಾ ಓಣಿ, ಗಳಲ್ಲಿ ಸಂಚರಿಸಿ ಶಾಲಾ ದಾಖಲಾತಿಗೆ ಅರ್ಹರಾಗಿರುವ ಹೆಣ್ಣು ಮಕ್ಕಳ ಮನೆ ಮನೆಗೆ ಶಿಕ್ಷಕರು, ಶಿಕ್ಷಕಿಯರು ತೆರಳಿ ಮಕ್ಕಳಿಗೆ ಆರತಿ ಬೆಳಗಿ ಪುಷ್ಪ ನೀಡಿ ಹಾಗೂ ಸಿಹಿ ಹಂಚಿ ಶಾಲಾ ದಾಖಲಾತಿ ಮಾಡಿಕೊಳ್ಳಲಾಯಿತು. 

ಶಾಲಾ ಮಕ್ಕಳು, ಶಿಕ್ಷಕರು ವಿವಿಧ ರೀತಿಯ ಶಿಶುಗೀತೆ, ಮನೋರಂಜನೆ ಹಾಡುಗಳನ್ನು ಹಾಡುವುದ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಿದರು. 

ಶಾಲೆಯ ಶಿಕ್ಷಕರು, ಶಿಕ್ಷಕಿಯರು ಮಕ್ಕಳ ದಾಖಲಾತಿ ಮಾಡಿಕೊಂಡರು. 


ಸುದ್ದಿ ಓದಿ