ಪುಸ್ತಕಗಳಿಂದ ಜ್ಞಾನ ವೃದ್ಧಿ: ತುಗಶೆಟ್ಟಿ
ಶೇಡಬಾಳ 12: ಪುಸ್ತಕಗಳು ಮಾನವನ ಜ್ಞಾನವನ್ನು ಹೆಚ್ಚಿಸುತ್ತವೆ. ನಾವು ನಮ್ಮ ಆಧುನಿಕ ದೈನಂದಿನ ಜೀವನದ ಜೊತೆಗೆ ಪುಸ್ತಕಗಳಿಗೂ ಸಮಯ ನೀಡುವುದು ಅನಿವಾರ್ಯವಾಗಿದೆ ಎಂದು ಪ್ರಾಚಾರ್ಯ ಮೇಜರ್ ವ್ಹಿ.ಎಸ್.ತುಗಶೆಟ್ಟಿ ಹೇಳಿದರು.
ಅವರು ಶುಕ್ರವಾರ ದಿ. 12ರಂದು ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ಜ್ಞಾನಯೋಗಿ ಗ್ರಂಥಾಲಯದಲ್ಲಿ ಆಯೋಜಿಸಿದ ಗ್ರಂಥ ಪಾಲಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲ ಮಾತನಾಡಿ ಪುಸ್ತಕಗಳು ಮಾನವನ ಭೌತಿಕ ವಿಕಾಸದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಣ ಮತ್ತು ಗ್ರಂಥಾಲಯ ಪರಸ್ಪರ ನಿಕಟವಾದ ಸಂಬಂಧ ಹೊಂದಿವೆ ಎಂದು ಹೇಳಿದರು. ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿ ಹಾಗೂ ಬೋಧಕ ವರ್ಗ ಆಧುನಿಕ ಸಂಪೂನ್ಮೂಲಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಗ್ರಂಥಾಲಯದ ಸಲಹಾ ಸಮಿತಿಯ ಚೇರಮನ್ ಪ್ರೊ.ಬಿ.ಡಿ. ಧಾಮಣ್ಣವರವರು ಗ್ರಂಥಾಲಯದ ಮಹತ್ವ ಹಾಗೂ ಡಾ. ಎಸ್.ಆರ್.ರಂಗನಾಥನರವರ ಜೀವನ ಮತ್ತು ಗ್ರಂಥಾಲಯ ವಿಜ್ಞಾನಕ್ಕೆ ಅವರ ಕೊಡುಗೆ ಕುರಿತು ಮಾತನಾಡಿದರು. ಗ್ರಂಥ ಪಾಲಕರಾದ ಪಿ.ಎಂ.ದೊಡಮನಿ ಅವರ ನೇತೃತ್ವದಲ್ಲಿ ಗ್ರಂಥಾಲಯ ಸಹಾಯಕ ವಿನಾಯಕ ಪೊರತುಗಲೆ ಪುಸ್ತಕ ಪ್ರದರ್ಶನ ಏರಿ್ಡಸಿದರು.
ಶಿವಾನಂದ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ಉಪಸ್ಥಿತರಿದ್ದರು. ಡಾ.ಡಿ.ಡಿ.ನಗರಕರ ಸ್ವಾಗತಿಸಿದರು. ಆಯ್ಕ್ಯೂಎಸಿ ಸಂಯೋಜಕ ಡಾ.ಎಸ್.ಪಿ.ತಳವಾರ ವಂದಿಸಿದರು. ಡಾ. ಎ.ಎಂ.ಜಕ್ಕಣ್ಣವರ ನಿರೂಪಿಸಿದರು. ಮಹಾವಿದ್ಯಾಲಯದ ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಸಮೂಹ ಉಪಸ್ಥಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.