ಎನ್‌ಎಸ್‌ಎಸ್ ಶಿಬಿರಗಳಿಂದ ಸೇವಾ ಮನೋಭಾವನೆ ಬೆಳಸಿಕೊಳ್ಳಿ : ಮಣ್ಣೂರ
ಇಂಡಿ 29: ವಿದ್ಯಾರ್ಥಿಗಳು ಜೀವನದಲ್ಲಿ ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವುದರ ಜೊತೆಗೆ ಜೀವನದಲ್ಲಿ ಶಿಸ್ತಿನ ಪಾಠ, ನಾಯಕತ್ವದ ಗುಣ ಸೇವಾ ಮನೋಭಾವನೆಗಳನ್ನು ಬೆಳಸಿಕೊಳ್ಳಬಹುದು ಎಂದು ಪ್ರಾಂಶುಪಾಲ ಜಿ.ಹೆಚ್.ಮಣ್ಣೂರ ಹೇಳಿದರು.
ಅವರು ಶನಿವಾರ ಪಟ್ಟಣದ ಎಸ್‌ಎಸ್ ವಿವಿ ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿದ್ಯಾನಗರದಲ್ಲಿ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಂತೇಶ್ವರ ವಿದ್ಯಾವರ್ದಕ ಸಂಘದ ಗೌರವ ಕಾರ್ಯದರ್ಶಿ ಪ್ರಭಾಕರ.ಎಸ್.ಬಗಲಿ, ಸಹ ಕಾರ್ಯದರ್ಶಿ ಸಿದ್ದಣ್ಣ.ರೇ.ತಾಂಬೆ, ಸೋನಾಲಿ ಘೋಡಕೆ, ಐಶ್ವರ್ಯ ಕಂಬಾರ, ಸಚಿನ ಮಾಶ್ಯಾಳಕರ, ರವಿ ಪುಟಾಣಿ ಮಾತನಾಡಿದರು.
ಪ್ರಾಂಶುಪಾಲ ಎಸ್.ಬಿ.ಜಾಧವ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಿಶ್ವಾಸ ಕೋರವಾರ, ಹಾಗೂ ವಿದ್ಯಾರ್ಥಿ ಪ್ರತಿನಿಧಿಯಾದ ಕುಮಾರಿ ಪಾರ್ವತಿ ಮಾಳಾ, ಡಾ.ಆನಂದ ಸಿ. ನಡುವಿನಮನಿ, ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಶ್ರೀಶೈಲ ಸಣ್ಣಕ್ಕಿ, ಡಾ. ಸಿ.ಎಸ್.ಬಿರಾದಾರ, ಎಸ್.ಯು.ರಾಠೋಡ, ಎಮ್.ಆರ್.ಕೋಣದೆ, ಆರ್.ಪಿ.ಇಂಗನಾಳ, ಬೋಧಕ, ಬೋಧಕೇತರರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.