ಯುವ ಜನತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ; ರೂಗಿ
ಇಂಡಿ17: ಭಾರತದಲ್ಲಿರುವ ಯುವ ಸಂಪತ್ತನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಂಡಲ್ಲಿ ಗ್ರಾಮಗಳು ಅತ್ಯಂತ ಅಭಿವೃದ್ಧಿ ಹೊಂದಿದ ಗ್ರಾಮಗಳಾಗಲು ಸಾಧ್ಯ ಎಂದು ತಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ ಹೇಳಿದರು.
ಅವರು ಸೋಮವಾರ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಶಾಂತೇಶ್ವರ ಪ.ಪೂ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಸೋಮನಾಥ ರೂಗಿ ಮಾತನಾಡಿ ಯುವ ಜನತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮತ್ತು ಗ್ರಾಮಗಳಲ್ಲಿಯ ಇರುವ ಯುವಕರಿಗೆ ಮತ್ತು ಕೃಷಿಕರಿಗೆ ಸರಾಯಿ, ಗುಟಕಾ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಲು ಕೇಳಿಕೊಂಡರು.
ಎನ್.ಎಸ್.ಎಸ್ ಅಧಿಕಾರಿ ಸುನೀಲ ಗಿಡಗಂಟಿ, ಎಸ್.ವಿ.ಪಂಡಿತ, ಬಿ.ಆರ್.ದೇವರ ಮಾತನಾಡಿದರು.
ಗ್ರಾ.ಪಂ ಸದಸ್ಯರಾದ ಅಶೋಕ ಖಂಡೆಕರ, ಶ್ರೀಶೈಲ ಸಾವಳಗಿ, ಭೀಮಾಶಂಕರ ಆಳೂರ, ಮೋಹನ ರಾಠೋಡ, ವಿಲಾಸ ಅಂದೇವಾಡಿ, ಶಿವಾನಂದ ವಠಾರ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಠ್ಠಲಗೌಡ ಪಾಟೀಲ, ರಾವಸಾಹೇಬ ಪಾಟೀಲ ಸೇರಿದಂತೆ ಅನೇಕರು ಇದ್ದರು.