ಇಂಡಿ

ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆಗಳಲ್ಲಿ ತೊಡಗಿಕೊಳ್ಳಿ: ಅಕ್ಕಿ

ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆಗಳಲ್ಲಿ ತೊಡಗಿಕೊಳ್ಳಿ: ಅಕ್ಕಿ

ಇಂಡಿ: ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವದರಿಂದ ಅವರ ಮನಸ್ಸು ಅರಳುವ ಜೊತೆಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತವೆ  ಎಂದು ಸಂಶೋಧಕ ಡಿ.ಎನ್‌.ಅಕ್ಕಿ ಹೇಳಿದರು. 

ಶನಿವಾರ ಪಟ್ಟಣದ ಸೌ.ಎ.ಜಿ.ಗಾಂಧಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ವಿಷಯ ವೇದಿಕೆ ಉದ್ಘಾಟನೆ ಹಾಗೂ ಮಕ್ಕಳ ಸ್ವರಚಿತ ಕವನಗಳ ಹೊತ್ತಿಗೆ ಉದ್ಘಾಟನೆ ಹಾಗೂ ಮಕ್ಕಳ ಕವಿಗೋಷ್ಠಿ ಕಾರ‌್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.   

ಕನ್ನಡ ಪಂಡಿತರಾದ ರಾಮಚಂದ್ರ ಬಿರಾದಾರ,  ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿ,  ಕನ್ನಡ ವಿಷಯ ಶಿಕ್ಷಕ ಕೃಷ್ಣಾ .ಎಚ್‌.ಬಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ವರು ಪ್ರಯತ್ನ ನಡೆಸಬೇಕು. ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳು ಸೃಜನಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕತೆ,ಕವನ,ಕವಿತೆಗಳು ಮಕ್ಕಳಿಗೆ ನೈಜ ಬದುಕನ್ನು ಕಟ್ಟಿಕೊಡುತ್ತವೆ  ಎಂದರು.  

ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಸಂಸ್ಥೆಯ ಸಹ ಕಾರ್ಯದರ್ಶಿಗಳಾದ ಸಿದ್ದಣ್ಣ ತಾಂಬೆ ಮಾತನಾಡಿ, ಶಾಲಾ ಸಿಬ್ಬಂದಿ ವರ್ಗದವರ ಸತತ ಪರಿಶ್ರಮದಿಂದ ಹಾಗೂ ಮುಖ್ಯೋಪಾಧ್ಯಾಯ ರಾಘವೇಂದ್ರ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಶಾಲಾ ದೈನಂದಿನ ಚಟುವಟಿಕೆಗಳು ಕ್ರಿಯಾಶೀಲತೆಯಿಂದ ಕೂಡಿವೆ ಎಂದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ ದೇವರ, ಬಸವರಾಜೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್‌.ಎ. ಶಿರಶ್ಯಾಡ ಮತ್ತಿತರಿದ್ದರು. ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.  


ಸುದ್ದಿ ಓದಿ