ಉತ್ತರ ಕರ್ನಾಟಕದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಿ: ವಸ್ತ್ರದ್
ಇಂಡಿ: ಉತ್ತರ ಕರ್ನಾಟಕದ ಯುವ ಪ್ರತಿಭೆಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಿ ಅವರಿಗೆ ಬೆಂಬಲಿಸಬೇಕು. ಚಿತ್ರರಂಗದಲ್ಲಿ ನಮ್ಮೂರಿನ ಯುವಕನೋರ್ವ ಚಿತ್ರನಾಯಕನಾಗಿ ಹೊರಹೊಮ್ಮಿದ್ದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಡಾ. ಸುಹಾಸಿನಿ (ದೀಪಾ) ವಸ್ತ್ರದ್ ಹೇಳಿದರು.
ಅವರು ಗುರುವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ಸಭಾಭವನದಲ್ಲಿ ಇಂಡಿಯ ಯುವಚಿತ್ರನಟ ಪಂಚಾಕ್ಷರಿ (ಪಂಚಿ) ಸ್ವಾಮಿ ಅವರಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಚಿತ್ರರಂಗದಲ್ಲಿ ಉತ್ತರ ಕರ್ನಾಟಕದವರಿಗೆ ಅವಕಾಶಗಳು ಬಹಳಷ್ಟು ವಿರಳವಾಗಿದ್ದರೂ ನಮ್ಮೂರ ಪ್ರತಿಭೆ ಪಂಚಾಕ್ಷರಿ ಸ್ವಾಮಿ ಅವರು ನಾಲ್ಕಾರು ಚಿತ್ರಗಳಲ್ಲಿ ನಟಿಸಿ ನಾಯಕನಟನಾಗಿ ಹೊರಹೊಮ್ಮಿದ್ದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಚಿತ್ರನಟ ಪಂಚಾಕ್ಷರಿ ಸ್ವಾಮಿ ಮಾತನಾಡಿ ನನ್ನನ್ನು ಬೆಂಬಲಿಸುತ್ತ ನಮ್ಮ ಭಾಗದ ಜನ ಸತ್ಕಾರ ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಭಾಗದ ಜನರಿಗೆ ನನ್ನ ಜೀವನ ಇರುವವರೆಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಎಂದ ಆಶಿಸುವೆ ಎಂದರು.
ಸೌಹಾರ್ದದ ಅಧ್ಯಕ್ಷ ಉಮೇಶ ಬಳಬಟ್ಟಿ, ಉಪಾಧ್ಯಕ್ಷ ಯಲಗೊಂಡ ಬೇವನೂರ, ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ಮಠಪತಿ, ವಿಠ್ಠಲ ಪಟ್ಟಣ್, ಸಿದ್ದಾಥ ಅರಳಿ, ಚಂದ್ರಾಮ ಮೇಡೇದಾರ, ಸಿಬ್ಬಂದಿಗಳಾದ ಅಶೋಕ ಬಳಬಟ್ಟಿ, ಶ್ರೀಕಾಂತ ಗಡಗಲಿ, ಸಚಿನ್ ಮೇಡೇದಾರ, ಗ್ರಾಹಕರಾದ ಅರವಿಂದ ಪಾಟೀಲ, ಶ್ರೀಶೈಲ ಮುಳಜಿ, ಗಂಗಾಧರ ಸಾಲೇಗಾಂವ, ಶಿವಾನಂದ ಚಾಳೀಕಾರ, ರಾಜು ನಾಯ್ಕೋಡಿ, ಭೀಮಾಶಂಕರ ಆಳೂರ, ಮಹೇಶ ನಾರಾಯಣ್, ಸ್ವಸ್ಥಿಕ್ ಕಾಮಗೊಂಡ ಸೇರಿದಂತೆ ನೂರಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.