ರಾಣೆಬೆನ್ನೂರ

ಐಎಎಸ್ ಅಧಿಕಾರಿ ಕೆ. ಶಿವರಾಂ ನಿಧನ: ರಾಣೇಬೆನ್ನೂರ ಅಂಬೇಡ್ಕರ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಐಎಎಸ್ ಅಧಿಕಾರಿ ಕೆ. ಶಿವರಾಂ ನಿಧನ: ರಾಣೇಬೆನ್ನೂರ ಅಂಬೇಡ್ಕರ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ರಾಣೇಬೆನ್ನೂರು 03:  ಸಮಾಜದಲ್ಲಿರುವ ಎಲ್ಲ ಸಮುದಾಯದವರ ಸಮಗ್ರ ಸಮಾನತೆಯ ಅಭಿವೃದ್ಧಿಗಾಗಿ ಶ್ರಮಿಸಿದ ಧೀಮಂತ ಅಧಿಕಾರಿಯಾಗಿದ್ದ ಕೆ. ಶಿವರಾಂ ಅವರ ಅಕಾಲಿಕ ನಿಧನದಿಂದಾಗಿ ನಾಡು ಬಡವಾಗಿದೆ ಎಂದು ಛಲವಾದಿ ಮಹಾಸಭಾದ ತಾಲೂಕ ಅಧ್ಯಕ್ಷ ಬಸವರಾಜ ಸಾವಕ್ಕನವರ ವಿಷಾದಿಸಿದರು. 

ಶುಕ್ರವಾರ ಸಂಜೆ ದೇವರಗುಡ್ಡ ರಸ್ತೆಯ, ಅಂಬೇಡ್ಕರ್ ನಗರದಲ್ಲಿ ದಿ. ಕೆ ಶಿವರಾಂ ಅವರ ಸ್ಮರಣೆಯಲ್ಲಿ, ಡಾ. ಬಿ.ಆರ್‌. ಅಂಬೇಡ್ಕರ್ ಸೇವಾ ಸಂಸ್ಥೆ  ಛಲವಾದಿ ಮಹಾ ಸಭಾ ತಾಲೂಕ ಘಟಕ  ಆಯೋಜಿಸಿದ್ದ, ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.        ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದ ಏಕೈಕ ಸಮುದಾಯದ ವ್ಯಕ್ತಿ ಆವರಾಗಿದ್ದರು, ನಾಡಿನ ಜನರ ಜನಪರ ಯೋಜನೆಗಳ ಚಿಂತನೆಯ ಹರಿಕಾರರಾಗಿದ್ದರು, ಅಷ್ಟೇ ಅಲ್ಲದೆ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಎಲೆ ಮರೆಯ ಕಾಯಿಯಂತೆ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ತ್ಯಾಗಿ ಅವರಾಗಿದ್ದರು. ಅವರ ಈ ಅಕಾಲಿಕ ನಿಧನ ಸಮಾಜಕ್ಕೆ, ನಾಡಿನ ಸಮುದಾಯಕ್ಕೆ, ಮತ್ತು ಚಲನಚಿತ್ರ ರಂಗಕ್ಕೆ ಹಾಗೂ ಯುವ ಜನರ ಪಾಲಿಗೆ ತುಂಬಲಾರದ ನಷ್ಟವಾಗಿದೆ ಎಂದು ಬಸವರಾಜ್ ಅವರು ವಿಷಾದ  ವ್ಯಕ್ತಪಡಿಸಿದರು.          

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಗಲಿದ ನಾಯಕನ ಭಾವಚಿತ್ರಕ್ಕೆ ಸಾಮೂಹಿಕವಾಗಿ  ಪುಷ್ಪ ನಮನ ಸಲ್ಲಿಸಿ, ಸಂತಾಪ ಸೂಚಿಸಿದರು.  ರಾಜಕಾರಣದಲ್ಲಿ ನೀರೀಕ್ಷಿತ ಸಾಧನೆ ಸಾಧಿಸಲಾಗಲಿಲ್ಲ ಎಂಬುದು ದುರಂತ. ಅಂತಹ ಬಹುಮುಖ ಪ್ರತಿಭೆಯ ಸ್ಮರಣೆಗಾಗಿ ರಾಜ್ಯ ಸರ್ಕಾರ ಕೆ.ಶಿವಾರಾಂ ರವರ ಸಾಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ  ಬೃಹತ್ ಸ್ಮಾರಕ ಮತ್ತು ಸಂಶೋಧನಾ ಕೇಂದ್ರಗಳು ಮತ್ತು ಗ್ರಂಥಾಲಯವನ್ನು ಸ್ಥಾಪಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ನಿವೃತ್ತ ಶಿಕ್ಷಕ ಶ್ರೀಕಾಂತ ಹೊಸಮನಿ, ಸಮಾಜದ ಮುಖಂಡರಾದ ಕುಬೇರ​‍್ಪ ಅಟವಾಳಗಿ ಅಂಬೇಡ್ಕರ್ ಸೇವಾ ಸಂಸ್ಥೆಯ ಸಂಸ್ಥಾಪಕ ಶ್ರೀಧರ್ ಸಿ.,ಕಲಾವಿದರಾದ ಮಹೇಶ್, ಮುತುರಾಜ್ ಸಾವಕ್ಕನವರ,ಸಂಸ್ಥೆಯ ಪಧಾಧಿಕಾರಿಗಳಾದ ಗುಡ್ಡೆಶ್‌.ಎಂ, ಮಣಿಕಂಠ ಎಸ್, ಗೋಪಿ, ಹಂಸದ್ವಜ,  ಮಹಿಳಾ ಮುಖಂಡರಾದ ಶಾಂತಮ್ಮ ಎಂ, ವೀಣಾ ಘಂಟೆರ್, ನಾಗರತ್ನ,  ಯುವ ಮುಖಂಡರಾದ ನಾಗರಾಜ್, ಹನುಮಂತ ಎಸ್, ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು. 


ಸುದ್ದಿ ಓದಿ