ಬೈಲಹೊಂಗಲ

ಡಾ. ಬಾಬು ಜಗಜೀವನ ರಾಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಮಹಾಂತೇಶ ದೊಡಗೌಡ್ರ

ಡಾ. ಬಾಬು ಜಗಜೀವನ ರಾಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಮಹಾಂತೇಶ ದೊಡಗೌಡ್ರ


ಬೈಲಹೊಂಗಲ 06: ಡಾ. ಬಾಬು ಜಗಜೀವನ ರಾಮ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಹೇಳಿದರು. 

   ಅವರು ಪಟ್ಟಣದ ಹರಳಯ್ಯ ಕಾಲೋನಿಯ ಸಮುದಾಯ ಭವನದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಜಗಜೀವನರಾಮ ಅವರ 115 ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಯುವಕರಿಗೆ ಸರಕಾರಿ ಉದ್ಯೋಗ ಮಾತ್ರ ಉದ್ಯೋಗವಲ್ಲ. ನಾವು ನಮ್ಮ ಉಪಜೀವನಕ್ಕಾಗಿ ಮಾಡುವ ಕೆಲಸವೂ ಉದ್ಯೋಗವೇ ಆಗಿದೆ. ನಾವು ನಮ್ಮ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆಯಿಂದ, ಪ್ರೀತಿಯಿಂದ ಮಾಡಿದರೆ ನಾವು ಯಶಸ್ವಿಯಾಗುತ್ತೇವೆ. ಯುವಕರು ಸಮಯ ಹಾಳು ಮಾಡದೆ ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡು ಅವರನ್ನು ಅರ್ಥ ಮಾಡಿಕೊಂಡು ಅವರ ಜೀವನ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು.  

       ಉಪನ್ಯಾಸಕ ಮಹಾಂತೇಶ ಕಾಳೆ ಅವರು ಡಾ.ಜಗಜೀವನರಾಮ ಅವರ ಕುರಿತು ಮಾರ್ಮಿಕವಾಗಿ ಉಪನ್ಯಾಸ ನೀಡಿ ಮಾತನಾಡಿ, ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸಮಾಜ ಸೇವಕರಾಗಿ ಅವರು ನಡೆದ ದಾರಿಯೇ ನಮಗೆಲ್ಲ ದಾರೀದೀಪವಾಗಿದೆ. ಅವರ ತತ್ವ, ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ತಿಳಿಸಿದರು. 

       ವೇದಿಕೆ ಮೇಲೆ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಬಿ.ಯಮನೂರ, ತಹಸೀಲ್ದಾರ ಬಸವರಾಜ ನಾಗರಾಳ, ತಾಪಂ.ಇಒ ಸುಭಾಸ ಸಂಪಗಾಂವಿ, ಪಿಸೈ ರಾಜು ಪೂಜೇರಿ, ಡಾ.ಸಂಜಯ ಸಿದ್ದನ್ನವರ, ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಬಡ್ಲಿ, ಮೋಹನ ಮುರಗೋಡ, ಅರ್ಜುನ ರಾಯಬಾಗ, ರಮೇಶ ಹುಲ್ಲೇನ್ನವರ,  ರಮೇಶ ರಾಯಪ್ಪಗೋಳ,  ರುದ್ರ​‍್ಪ ನಿಂಗಣ್ಣವರ, ಸುರೇಶ ರಾಯಪ್ಪಗೋಳ, ಗಂಗಪ್ಪ ಭರಮನ್ನವರ, ನಿಂಗಪ್ಪ ಅರಕೇರಿ, ಆನಂದ ಪಠಾತ, ಬಸವರಾಜ ಶಿಂತ್ರಿ, ಮಂಜುನಾಥ ಸಿಡ್ಲಗೋಳ ಸೇರಿದಂತೆ ತಾಲೂಕು ಮಟ್ಟದ ಅದಿಕಾರಿಗಳು ಅನೇಕರು ಇದ್ದರು.  

ಜಗದೀಶ ಅಣ್ಣಿಗೇರಿ, ವಿದ್ಯಾ ದೊಡಮನಿ, ಬಿ.ಆರ್‌.ಕೌಜಲಗಿ, ಬಸವರಾಜ ಕಿತ್ತೂರು, ಶಂಕರ ಕೋರಿಕೊಪ್ಪ, ವಿಠ್ಠಲ ನ್ಯಾಮಗೌಡರ, ಸಂಗಮೇಶ ರೊಳ್ಳಿ,  ಸೇರಿದಂತೆ ಹರಳಯ್ಯ ಕಾಲೋನಿಯ ಸಮಾಜ ಭಾಂದವರು ಇದ್ದರು. 

  ತಹಸೀಲ್ದಾರ ಬಸವರಾಜ ನಾಗರಾಳ ಸ್ವಾಗತಿಸಿದರು, ಎಂ.ಎಫ್‌.ಮಕರವಳ್ಳಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ