ಬೈಲಹೊಂಗಲ

ಪವರಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ

ಪವರಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ

ಬೈಲಹೊಂಗಲ 31: ಖ್ಯಾತ ಚಿತ್ರನಟ ಪವರಸ್ಟಾರ್ ಪುನೀತ ರಾಜಕುಮಾರ ಅಕಾಲಿಕ ನಿಧನಕ್ಕೆ ಚಿತ್ರ ನಿರ್ಮಾಪಕರು, ಮಾಜಿ ಸಚಿವ, ಶಾಸಕರು, ಕಲಾವಿದರು, ಗಣ್ಯ ಮಾನ್ಯರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.  

ಒಬ್ಬ ಓರ್ವ ಕಲಾವಿದನಾಗಿ ಸಾಮಾಜಿಕ ಜವಾಬ್ದಾರಿ ಅರಿತು ಹತ್ತು ಹಲವು ಸಮಾಜಮುಖಿ ಕ್ರೀಯಾಶೀಲ ಕಾರ್ಯಗಳನ್ನು ನಡೆಸಿ ಜನಾನುರಾಗಿಯಾಗಿದ್ದು ಯುವ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳಲ್ಲಿ ನಟಿಸಿ   ಅಪಾರ ಕೀರ್ತಿ ತಂದುಕೊಟ್ಟ ಪುಣೀತ ರಾಜಕುಮಾರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಭಗವಂತನು ಅವರ ಕುಟುಂಬಕ್ಕೆ ದುಖ: ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ. 

ಸುಕ್ಷೇತ್ರ ಇಂಚಲದ ಡಾ. ಶಿವಾನಂಧ ಭಾರತಿ ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಭಗಳಾಂಭಾ ದೇವಸ್ಥಾನದ ವೀರಯ್ಯ ಸ್ವಾಮಿ ಹಿರೇಮಠ, ಚಿತ್ರನಟ ಶಿವರಂಜನ ಬೋಳಣ್ಣವರ, ಚಿತ್ರ ನಿರ್ಮಾಪಕರಾದ ಗಂಗಪ್ಪ ಬೋಳಣ್ಣವರ, ದಯಾನಂದ ಚಿಕ್ಕಮಠ, ಜಿಲ್ಲಾ ಕಸಾಪ ಅಧ್ಯಕ್ಷ್ಯೆ ಮಂಗಳಾ ಮೆಟಗುಡ್ಡ್‌, ಮಾಜಿ ಸಚಿವ ಶಿವಾನಂದ ಕೌಜಲಗಿ, ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ತಾಲೂಕಾ ಕಜಾಪ ಚಂದ್ರಶೇಖರ ಕೊಪ್ಪದ, ಜಿಲ್ಲಾ ಕಸಾಪ ಅಧ್ಯಕ್ಷ ಮೋಹನ ಪಾಟೀಲ, ಕಲಾವಿದ ಸಿ.ಕೆ.ಮೆಕ್ಕೇದ, ಉದ್ಯಮಿ ಮಹಮ್ಮದಶಾ ನಧಾಪ್, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಕಸಾಪ ಮಾಜಿ ತಾಲೂಕಾಧ್ಯಕ್ಷ ಈಶ್ವರ ಹೋಟಿ, ಮುಖಂಡರಾದ ಬಸವರಾಜ ಕೌಜಲಗಿ, ವಿರುಪಾಕ್ಷ ವಾಲಿ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಗುರು ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ್‌, ಶ್ರೀಕಾಂತ ಶಿರಹಟ್ಟಿ, ಕಜಾಪ ತಾಲೂಕಾ ವಕ್ತಾರ ಮಹಾಂತೇಶ ರಾಜಗೋಳಿ, ವಿಠಲ ಅಜ್ಜನಕಟ್ಟಿ, ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ