ಗುಳೇಗುಡ್ಡ

ವಿದ್ಯಾರ್ಥಿಗಳಿಂದ ಮತದಾನ: ಶಾಲಾ ಸಂಸತ್ತಿಗೆ ಚುನಾವಣೆ

ವಿದ್ಯಾರ್ಥಿಗಳಿಂದ ಮತದಾನ: ಶಾಲಾ ಸಂಸತ್ತಿಗೆ ಚುನಾವಣೆ
ಗುಳೇದಗುಡ್ಡದ ರಾಠಿ ಮತ್ತು ಕಾವಡೆ ಶಾಲೆಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ಜರುಗಿತು

ಗುಳೇದಗುಡ್ಡ 18: ಪಟ್ಟಣದ ಪಿ.ಇ.ಟ್ರಸ್ಟಿನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆ ಕ್ರಮಬದ್ಧವಾಗಿ ಜರುಗಿತು. ಚುನಾವಣೆಯ ಬಗೆಗೆ ಮಕ್ಕಳಿಗೆ ಅರಿವು ಮಾಡಿಕೊಡುವ ಸಂವಿಧಾನ ಬದ್ಧವಾಗಿ ನಾಮಪತ್ರ ಸಲ್ಲಿಸುವ, ನಾಮಪತ್ರ ಪರಿಷ್ಕರಣೆ ಮಾಡುವ, ನಾಮಪತ್ರ ಹಿಂತೆಗೆದುಕೊಳ್ಳುವ, ಚಿನ್ಹೆಗಳ ಆಯ್ಕೆ, ಚುನಾವಣಾ ಪ್ರಚಾರ ಸೇರಿದಂತೆ ಶಿಸ್ತು ಬದ್ಧವಾಗಿ ಶಾಲಾ ಸಂಸತ್ತ ಚುನಾವಣೆ ಮಾಡಲಾಯಿತು. 

ನಾಲ್ಕು ವಿಭಾಗಗಳಿಗೆ ನಡೆದ ಚುನಾವಣೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಮತದಾನ ಮಾಡಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರ ಜೊತೆಗೆ ಚುನಾವಣೆಯ ಮಹತ್ವವನ್ನು ಅರಿತುಕೊಂಡರು.  

ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಬಿ.ಬಿ. ನರಸಲಗಿ, ಯು.ಕೆ. ಪೂಜಾರ, ಎಸ್‌.ಎಮ್‌. ಮಕಾಂದರ, ಎಸ್‌. ಬಿ. ಕೋತ ಹಾಗೂ ಜಿ.ಬಿ. ಉಂಕಿ ಶಾಲಾ ಸಂಸತ್ತ ಚುನಾವಣೆಯನ್ನು ಅಚ್ಚುಕಟ್ಟಾಗಿ ನೇರವೇರಿಸಿಕೊಟ್ಟರು. ಶಾಲೆಯ ಚೇರಮನ್ ಎ. ಎನ್‌. ಹೆಗಡಿ, ಶಾಲೆಯ ಮುಖ್ಯ ಗುರುಮಾತೆಯರಾದ ಜೆ. ಜೆ. ಲೋಬೊ ಮತ್ತು ವ್ಹಿ. ಬಿ. ಹಳ್ಳೂರ ಉಪಸ್ಥಿತರಿದ್ದರು.  

ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು: ಆರೋಗ್ಯ ಮಂತ್ರಿಯಾಗಿ ವಿನಾಯಕ. ಬ. ಕವಿಶೆಟ್ಟಿ, ಸಾಂಸ್ಕೃತಿಕ ಮಂತ್ರಿಯಾಗಿ ಮೆಹಬೂಬ ದೊಟಿಹಾಳ, ಕ್ರೀಡಾ ಮಂತ್ರಿಯಾಗಿ ಅಭಿಷೇಕ ವಡ್ಡರ ಹಾಗೂ ಶಿಸ್ತು ಮಂತ್ರಿ ಯಾಗಿ ಸಹನಾ ರಂಜಣಗಿ  ಆಯ್ಕೆಯಾದರು. 


ಸುದ್ದಿ ಓದಿ