ಸರ್ಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ
ಹೂವಿನ ಹಡಗಲಿ 09: 2024-2029ನೇ ಸಾಲಿನ ಅವಧಿಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಚುನಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ ಎಂದು ಚುನಾವಣಾ ಅಧಿಕಾರಿ ಎಂ ಪಿ ಎಂ ಪಕ್ಕೀರಗೌಡ ತಿಳಿಸಿದರು. ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಆರಂಭಗೊಂಡ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಕ್ರಿಯೆ ಬಗ್ಗೆ ಅವರು ಮಾಹಿತಿ ನೀಡಿದರು. ಇಲಾಖೆವಾರು ಕ್ಷೇತ್ರವಾರು ಒಟ್ಟು 34 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ ಎಂದರು.
ಅಕ್ಟೋಬರ್ 9 ರಿಂದ ನಾಮಪತ್ರ ಸಲ್ಲಿಕೆ ಆರಂಭ. ನಾಮಪತ್ರ ಸಲ್ಲಿಕೆ ಕೊನೆಯ ದಿನ ಅಕ್ಟೋಬರ್ 18.ನಾಮಪತ್ರಗಳ ಪರೀಶೀಲನೆ ಮತ್ತು ಅರ್ಹ ಅಭ್ಯರ್ಥಿಗಳ ಯಾದಿ ಪ್ರಕಟ ಅಕ್ಟೋಬರ್ 19.ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 21.ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುವ ದಿನಾಂಕ ಅಕ್ಟೋಬರ್ 28.ಚುನಾವಣೆ ನಂತರ ಅಂದೇ ಮತಗಳ ಎಣಿಕೆ ಕಾರ್ಯ ನಡೆಯುತ್ತದೆ ಎಂದು ತಿಳಿಸಿದರು.ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಎಂ ಪಿ ಎಂ ಅಶೋಕ್, ಗೌರವಾಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ ಎಲ್ಲಾ ಇಲಾಖೆಯವರು ಪರಸ್ಪರ ಸೌಹಾರ್ದತೆ ಸಮನ್ವಯತೆಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಸಹಕರಿಸಿರಿ ಎಂದು ಹೇಳಿದರು.ಸಹಾಯಕ ಚುನಾವಣಾಧಿಕಾರಿ ಕಿರಣ್ ಕುಮಾರ್ ಎಸ್,ನೌಕರರ ಸಂಘದ ಕಾರ್ಯದರ್ಶಿ ರತ್ನಾಕರ್, ಸಹ ಕಾರ್ಯದರ್ಶಿ ಮಂಜುನಾಥ ಬೋವಿ ಉಪಾಧ್ಯಕ್ಷ ಬಿ ಎಸ್ ಪುಷ್ಪಾ ಉಪಸ್ಥಿತರಿದ್ದರು.ಇದೇ ವೇಳೆ ಪ್ರೌಢಶಾಲಾ ವಿಭಾಗದಿಂದ ಶಿವಕುಮಾರ್ ಗಡ್ಡಿ ನಾಮಪತ್ರ ಸಲ್ಲಿಸಿದರು.