ಶಿಗ್ಗಾವ್

ತಾಲೂಕಿನ ಛಲವಾದಿ ಮಹಾಸಭಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕಿನ ಛಲವಾದಿ ಮಹಾಸಭಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ                           

 ಶಿಗ್ಗಾವಿ 21:  ತಾಲೂಕಛಲವಾದಿ ಮಹಸಭಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು ನಗರದ ಅಂಬೇಡ್ಕರ ಭವನದಲ್ಲಿ ನಡೆದಕಾರ್ಯಕ್ರಮದಲ್ಲಿ ನೂತನ ಶಿಗ್ಗಾಂವ ತಾಲೂಕ ಛಲವಾದಿ ಮಹಾಸಭಾ ಸಮಿತಿಗೆ ಅಧ್ಯಕ್ಷರನ್ನಾಗಿ ಶರೀಫ ಮಾಕಪ್ಪನವರ, ಗೌರವಾಧ್ಯಕ್ಷ ಶಂಕರ ಇಂಗಳಗಿ ಉಪಾಧ್ಯಕ್ಷ ಯಲ್ಲಪ್ಪ ವಾಲಿಕಾರ, ಪ್ರಮೋದ ಛಲವಾದಿ, ಮಹೇಶ ಕಳಸದ ಪ್ರಧಾನ ಕಾರ್ಯದರ್ಶಿ , ಈರಪ್ಪ ಕಾಳಿ ಸಹಕಾರ್ಯದರ್ಶಿ  ನಂಜುಂಡಿ ಮೊಗಲಾಯಿ ಖಜಾಂಚಿ ಹನಮಂತಪ್ಪ ಕಾಳಿ ಇವರನ್ನು ಆಯ್ಕೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಛಲವಾದಿ ಮುಖಂಡ ಎಂ.ಬಿ.ಕಾಳೆ ಮಾತನಾಡಿ ಛಲವಾದಿ ಸಮುದಾಯಅತಿ ಹಿಂದುಳಿದ ಸಮುದಾಯ ಆದರೂ ಕೂಡಾ ಈ ಸಮುದಾಯಕ್ಕೆ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಇದೇ ಡಾ.ಬಾಬಾಸಾಹೇಬ ಅಂಬೇಡ್ಕರ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟದ ಮನೋಭಾವವನ್ನು ಅಳವಡಿಸಿಕೊಂಡು ಸಮುದಾಯದ ಜನರು ಮುನ್ನೆಲೆಗೆ ಬರಬೇಕು ಆ ನಿಟ್ಟಿನಲ್ಲಿ ಛಲವಾದಿ ಮಹಾಸಭಾ ಪದಾಧಿಕಾರಿಗಳು ಸಮುದಾಯದ ಸಂಘಟನೆಗೆ ಒತ್ತನ್ನು ನೀಡಿ ಶಿಕ್ಷಣದ ಜಾಗ್ರತಿಯನ್ನು ಮೂಡಿಸಬೇಕು ಎಂದರು.

 ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಶಂಭು ಕಳಸದ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಸಮುದಾಯದ ಜನರಲ್ಲಿ ಸಂಘಟನೆಯ ಮನೋಭಾವ ಕಡಿಮೆಯಾಗುತ್ತಿದೆ ಎಲ್ಲರಂಗದಲ್ಲೂ ನಾವು ಹಿಂದುಳಿಯುತ್ತಿದ್ದೆವೆ ಹಾಗಾಗಿ ಛಲವಾದಿ ಮಹಾಸಭಾ ನಮ್ಮ ಸಮುದಾಯದ ಜನರಲ್ಲಿ   ಜಾಗ್ರತಿ ಮೂಡಿಸುವುದರ ಜೊತೆಗೆ ಅವರ ಕಷ್ಟ ಸುಖಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾದಬೇಕು ಎಂದರು.

 ನೂತನಅಧ್ಯಕ್ಷ ಶರೀಫ ಮಾಕಪ್ಪನವರ ಮಾತನಾಡಿ ತಾಲೂಕಿನಲ್ಲಿರುವ ಚಲವಾದಿ ಸಮುದಾಯದ ಜನರಲ್ಲಿ ಜಾಗ್ರತಿ ಮೂಡಿಸುವುದರ ಜೊತೆಗೆ ಸಮುದಾಯವನ್ನು ಮುನ್ನೆಲೆಗೆತರುವ ಕೆಲಸವನ್ನು ಮಾಡುತ್ತೇನೆ ತಾಲೂಕ ಅಧ್ಯಕ್ಷರನ್ನಾಗಿ ಮಾಡಿಜವಾಬ್ದಾರಿ ನೀಡಿದ ಹಿರಿಯರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರತತ್ವ ಸಿದ್ಧಾಂತಗಳ ಅಡಿಯಲ್ಲಿ ಸಮುದಾಯದ ಸಂಘಟನೆಗೆ ಒತ್ತನ್ನು ನೀಡುತ್ತೆನೆ ಎಂದರು.

ಜಿಲ್ಲಾ ಸಮಿತಿಯ ಸದಸ್ಯ ಸುರೇಶಛಲವಾದಿ, ಅಶೋಕ ಕಾಳೆ,  ನೀಲವ್ವ ಕಾಲವಾಡ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕ ಚಲವಾದಿ ಸಮುದಾಯದ ಮುಖಂಡರುಗಳಾದ ಈರಣ್ಣ ಚಲವಾದಿ, ಧರ್ಮಣ್ಣಕಿವಡನವರ, ಶೇಖಪ್ಪ ಭೀಮನವರ, ರವಿ ಓಲೇಕಾರ, ಶೇಖಪ್ಪ ಡೊಳ್ಳೆಶ್ವರ, ನಿಂಗಪ್ಪ ಕಳಸದ ಹಾಗೂ ಇತರರು ಹಾಜರಿದ್ದರು ಪ್ರಧಾನ ಕಾರ್ಯದರ್ಶಿ  ಈರಪ್ಪ ಕಾಳೆ ಕಾರ್ಯಕ್ರಮ ನಿರ್ವಹಿಸಿದರು ಮಹೇಶ ಕಳಸದ ವಂದಿಸಿದರು.

ಸುದ್ದಿ ಓದಿ