ಕಾಗವಾಡ

12 ಸಾವಿರ ಅಧಿಕ ಮತಗಳಿಂದ ಜ್ಯೋತಿಕುಮಾರ ಪಾಟೀಲ ಆಯ್ಕೆ

12 ಸಾವಿರ ಅಧಿಕ ಮತಗಳಿಂದ ಜ್ಯೋತಿಕುಮಾರ ಪಾಟೀಲ ಆಯ್ಕೆ

ಶಿರೋಳ ದತ್ತ ಸಕ್ಕರೆ ಕಾರ್ಖಾನೆಯ ಚುನಾವಣೆ  

ಕಾಗವಾಡ 26: ನೆರೆಯ ಮಹಾರಾಷ್ಟ್ರದ ಶಿರೋಳ ತಾಲೂಕಿನ ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಂಡಳ ಚುನಾವಣೆಯಲ್ಲಿ ಕಾರ್ಖಾನೆ ಅಧ್ಯಕ್ಷ ಗಣಪತರಾವ ಪಾಟೀಲರ ನೇತೃತ್ವದಲ್ಲಿ ಎಲ್ಲ 21 ಸಂಚಾಲಕರು ಭರ್ಜರಿ ಮತಗಳಿಂದ ಚುನಾಯಿತಗೊಂಡರು. 

ಗುರುವಾರ ಜುಲೈ 25 ರಂದು ರಂದು ಶಿರೋಳದಲ್ಲಿ ನಡೆದ ಮತ ಏಣಿಕೆಯಲ್ಲಿ ಗಣಪತರಾವ ಪಾಟೀಲ ಇವರ ಗುಂಪಿನ ಹಾಗೂ ಕಾಗವಾಡ ಪಟ್ಟಣದ ಕಾರ್ಖಾನೆಯ ಉಪಾಧ್ಯಕ್ಷರಾದ ದಿ. ಸಿದ್ದಗೌಡ ಪಾಟೀಲ ಇವರ ಸುಪುತ್ರ ಜ್ಯೋತಿಕುಮಾರ ಪಾಟೀಲ ಇವರು ಸುಮಾರು 12 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಚುನಾಯಿತರಾದರು. ಇವರಿಗೆ ಕರ್ನಾಟಕದ ಮತದಾರರು ಸಾಥ ನೀಡಿದ್ದರು.  

ಜ್ಯೋತಿಕುಮಾರ ಪಾಟೀಲ ಚುನಾಯಿತಗೊಂಡು, ನಿರ್ದೇಶಕರಾಗಿ ಆಯ್ಕೆಯಾಗಿ ಪಟ್ಟಣಕ್ಕೆ ಆಗಮಿಸಿದಾಗ ಅವರ ಬೆಂಬಲಿಗರರು ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂತಸ ಹಂಚಿಕೊಂಡರು. 

ಜ್ಯೋತಿಕುಮಾರ ಪಾಟೀಲ ಮಾತನಾಡಿ, ದತ್ತ ಸಕ್ಕರೆ ಕಾರ್ಖಾನೆಗೆ ಕರ್ನಾಟಕ ಭಾಗದಿಂದ ಸುಮಾರು 10 ಲಕ್ಷ ಟನ್ ಕಬ್ಬು ಪೂರೈಕೆಯಾಗುತ್ತದೆ. ಎಲ್ಲ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮ್ಮ ತಂದೆ ಕೈಗೊಂಡ ಪ್ರಕಾರ ನಾನು ಮುಂದೆ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಈ ವೇಳೆ ಗ್ರಾಮದ ಅನೇಕ ಹಿರಿಯ ಮುಖಂಡರು, ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ