ಎಸ್ ಡಿ ಎಂ ಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ರಾಣೇಬೆನ್ನೂರು : ಆರ್ ಟಿ ಇ ಎಸ್ ಕಾಲೇಜು, ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ನಂ: 7 ರ 2023 ಮತ್ತು 24ನೇ ಸಾಲಿನ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯು ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕೃಷ್ಣಪ್ಪ ಕುರುವತ್ತಿ ಹಾಗೂ ಉಪಾಧ್ಯಕ್ಷರಾಗಿ ಮಹಾದೇವಪ್ಪ ಕೋಣನತಂಬಿಗಿ ಇವರುಗಳು ಆಯ್ಕೆಯಾದರು.
ಶಾಲಾ ಅಭಿವೃದ್ಧಿ ಸಮಿತಿಯ ನೂತನ ಸದಸ್ಯರು ಸಹ ಆಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ, ಮರಿಯಪ್ಪ ಪೂಜಾರ್, ಧಮೇಂದ್ರ ಜಾಲಗಾರ, ಅಶೋಕ್ ಫಾಶಿಗಾರ್, ನಾಗರತ್ನ, ಶಿಲ್ಪಾ ಚಕ್ರಸಾಲಿ, ನೇತ್ರಾವತಿ ಪವಾರ್, ಲಕ್ಷ್ಮಿ ಕನವಳ್ಳಿ, ನಾಗರತ್ನ ರೊಟ್ಟಿ ರೇಖಾ ಎಸ್, ಹೇಮಯ್ಯ ಕಾಕೋಳ, ಪ್ರಕಾಶ ಬುರಡಿಕಟ್ಟಿ, ನೀಲಮ್ಮ ಮಾಕನೊರ, ಸಿದ್ದಪ್ಪ ಭಾಗಲರ, ನೀಲಮ್ಮ ಕಾಟಿ, ಪರಮೇಶಪ್ಪ ಗೋಳಣ್ಣನವರ್, ಮತ್ತು ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ, ಹೆಚ್, ರಾಜೇಶ್ ಮುದ್ದಿ, ಪ್ರಧಾನ ಗುರುಗಳಾದ ಪ್ರತಿಭಾ ದೊಡ್ಮನಿ, ಎಂ.ಬಿ. ಗುರಪ್ಪಳವರ, ಸುಧೀಂದ್ರ, ಆರ್, ಶೋಭಾ ಪಾಟೀಲ, ಆರ್ ಬಸಮ್ಮ ಸೇರಿದಂತೆ, ಇಲಾಖೆಯ ಅನೇಕ ಅಧಿಕಾರಿಗಳು ಶಿಕ್ಷಕರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು