ಶಿಗ್ಗಾವ್

ಕುನ್ನೂರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.

ಕುನ್ನೂರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.

ಲೋಕದರ್ಶನ ವರದಿ

ಶಿಗ್ಗಾವಿ : ತಾಲೂಕಿನ ಕುನ್ನೂರ ಗ್ರಾಮದ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಮಂಜವ್ವ ಶಿವಾನಂದ ಉಪ್ಪಾರ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಶ್ರೀಕಾಂತವ್ವ ಮೋರಭದ ಆಯ್ಕೆಯಾದರು ಎಂದು ತಾ.ಪಂ.ಇಓ ಹಾಗೂ ಚುನಾವಣಾಧಿಕಾರಿಯಾದ ಪ್ರಶಾಂತ ತುಕರ್ಾಣಿ ಘೋಷೆಣೆಯನ್ನು ಮಾಡಿದರು.

ತಾಲೂಕಿನ ಕುನ್ನೂರ ಗ್ರಾಮ ಪಂಚಾಯತ 15 ಸದಸ್ಯರ ಬಲವನ್ನು ಹೊಂದಿದೆ, ಚುನಾವಣೆ ಜರುಗಿದ್ದು ಅಧ್ಯಕ್ಷ ಸ್ಥಾನಕ್ಕೆ ಮಂಜವ್ವ ಶಿವಾನಂದ ಉಪ್ಪಾರ ಅವರಿಗೆ 7 ಮತಗಳು ಬಂದರೆ ಅವರ ಪ್ರತಿಸ್ಪರ್ಧಿ  ಹಸೀನಾಬೀ ಮಾಬೂಸಾಬ ಬಂಕಾಪೂರ 7 ಮತಗಳನ್ನು ಪಡೆದು ಸಮನಾಗಿ ಮತವನ್ನು ಪಡೆದಿದ್ದರಿಂದ ಚಿಟಿ ಎತ್ತುವ ಮೂಲಕ ಮಂಜವ್ವ ಶಿವಾನಂದ ಉಪ್ಪಾರ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಘೋಷಣೆಯನ್ನು ಮಾಡಿದರು. 

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ರೇಣುಕಾ ಜಗದೀಶ ಕೇರಪ್ಪನವರ 6  ಮತಗಳನ್ನು ಪಡೆದು ಫರಾಭವಗೋಂಡರೆ ಶ್ರೀಕಾಂತವ್ವ ಕುಬೇರಪ್ಪ ಮೋರಭದ 8 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಎಂದು ಪ್ರಶಾಂತ ತುರ್ಕಿಣಿ ಸಹಾಯಕರಾಗಿ ಸುರೇಶ ತಗ್ಗಿಹಳ್ಳಿ ಸಹಾಯಕರಾಗಿಯೂ ಪಿಡಿಓ ಎಸ್.ಎಸ್. ಪಾವೀನ ಘೋಷಣೆಯನ್ನು ಮಾಡಿದರು. ತಾ.ಪಂ.ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿತು.  ಓರ್ವ ಸದಸ್ಯ ಪರ್ವತಗೌಡ ಫಕ್ಕೀರಗೌಡ ಪಾಟೀಲ ಚುನಾವಣೆಯಿಂದ ದೂರ ಉಳಿದಿದ್ದರು. ಸದಸ್ಯರುಗಳಾದ ಮಹೇಶ ಚಿಕ್ಕವೀರಮಠ, ಹಸೀನಾಬೀ ಬಂಕಾಪೂರ, ಗಂಗವ್ವ ಲಮಾಣಿ, ಡಿ.ಆರ್ ಬೋಮ್ಮನಹಳ್ಳಿ, ಹನುಮಂತಪ್ಪ ಮಾನೆ, ಸೇರಿದಂತೆ ಹಲವಾರು ಸದಸ್ಯರುಗಳು ಅಧಿಕಾರಿಗಳು ಅಭಿನಂದಿಸಿದರು 

ಸುದ್ದಿ ಓದಿ