ಚುನಾವಣೆ ಪರಿವಾನಿಕೆ: ಏಕ ಗವಾಕ್ಷಿ ತಂಡ
ಇಂಡಿ 01: ವಿಧಾನಸಭೆ 2023 ರ ಚುನಾವಣೆಗಾಗಿ ಸಭೆ, ಸಮಾರಂಭ, ಧ್ವನಿ ವರ್ಧಕ ಪರವಾನಿಕೆ, ಚುನಾವಣೆ ಕಚೇರಿ ಸೇರಿದಂತೆ ಚುನಾವಣೆ ಸಂಬಂದಿತ ಅನುಮತಿ ಪಡೆಯಲು ಏಕ ಗವಾಕ್ಷಿ ತಂಡ ರಚಿಸಲಾಗಿದೆ ಎಂದು ಇಂಡಿ ಮತಕ್ಷೇತ್ರದ ಚುನಾವಣೆ ಶಿರಸ್ತೆದಾರ ಎಸ್.ಆರ್. ಮುಜಗೊಂಡ ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಏಕ ಗವಾಕ್ಷಿ ತಂಡದ ಕುರಿತು ಅವರು ಮಾತನಾಡಿದರು.ಕಂದಾಯ ಇಲಾಖೆಯ ಎಸ್.ಆರ್. ಮುಜಗೊಂಡ, ಪೋಲಿಸ ಇಲಾಖೆಯ ಕೆ.ಜಿ. ಚವ್ಹಾಣ, ಪುರಸಭೆಯ ಎಲ್.ಎಸ್. ಸೋಮನಾಯಕ, ತಾ.ಪಂ ನ ವೈ.ಎಂ. ಮಾದರ, ಅಗ್ನಿ ಶಾಮಕ ಇಲಾಖೆಯ ಎಂ.ಎಸ್. ಇಂಡಿಕರ, ಲೋಕೋಪಯೋಗಿ ಇಲಾಖೆಯ ಷಣ್ಮುಖ ಚಂದನಸೇವೆ, ಹೆಸ್ಕಾಂನ ಶರಣಪ್ಪ ಕಟ್ಟಿಮನಿ, ಸಾರಿಗೆ ಇಲಾಖೆಯ ವಾಗೇಶ ಭಜಂತ್ರಿ ತಂಡದಲ್ಲಿದ್ದಾರೆ ಎಂದು ತಿಳಿಸಿದರು.