ಐನಾಪುರ ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಕೈಗೆ ಖಚಿತ ; ಕಾಂಗ್ರೆಸ್ ಪಕ್ಷದ ನಾಯಕ ರಾಜುಗೌಡ ಪಾಟೀಲ ವಿಶ್ವಾಸ: ಕಾಂಗ್ರೆಸ್ ಅಭ್ಯರ್ಥಿ ರಂಜನ ದಾನೊಳ್ಳಿ ಪರ ಪ್ರಚಾರ
ಲೋಕದರ್ಶನ ವರದಿ
ಕಾಗವಾಡ 25: 150 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಪಕ್ಷವಾಗಿದೆ. ಈ ಪಕ್ಷದಿಂದ ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯತ್ ಚುನಾವಣೆಗೆ ಸ್ಪರ್ದಿಸಿರುವ 19 ಅಭ್ಯರ್ಥಿಗಳ ಗೆಲುವು ಖಚಿತ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಜುಗೌಡ ಪಾಟೀಲ ಹೇಳಿದರು.
ಶನಿವಾರ ರಂದು ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯತ್ ಚುನಾವಣೆಯ ನಿಮಿತ್ಯ ವಾರ್ಡ ನಂಬರ 6ರ ಕಾಂಗ್ರೆಸ್ ಅಭ್ಯರ್ಥಿ ರಂಜನ ಆದಿನಾಥ ದಾನೊಳ್ಳಿ ಪರ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.
ಎಲ್ಲರನ್ನು ಸಮಾನವಾಗಿ ನೋಡಿಕೊಂಡು ಹೋಗುವ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಆದರೆ ಈಗ ರಾಜ್ಯ ಹಾಗೂ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕೋಮುವಾದಿ ಬಿಜೆಪಿ ಪಕ್ಷ ರೈತಪರ ಯಾವುದೇ ತರಹದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ರೈತರು ಬೆಳೆದ ಬೆಂಬಲ ಬೆಲೆ ಇಲ್ಲ, ಅತಿವೃಷ್ಟಿ, ಅನಾವೃಷ್ಟಿ ಪ್ರವಾಹದಂತ ಕಷ್ಟ ಕಾಲದಲ್ಲಿ ರೈತರ ಭಾವನೆಗಳಿಗೆ ಸ್ಪಂದಿಸಿಲ್ಲ, ಬಿಜೆಪಿ ಪಕ್ಷ ಎಂದೂ ರೈತರ ಪರವಾಗಿಲ್ಲ. ನಮ್ಮ ಭಾರತ ದೇಶ ಶೇಕಡಾ 65 ಕೃಷಿ ಪ್ರಧಾನ ದೇಶವಾಗಿರುವದರಿಂದ ರೈತರಿಗೆ ಯಾವುದೇ ಯೋಜನೆಗಳು ಜಾರಿಗೆ ತಂದಿಲ್ಲ, ಬಿಜೆಪಿ ಪಕ್ಷ ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲ ಮಾಡುತ್ತಿದೆಯೇ ಹೊರತು ರೈತರ ಪರವಾಗಿಲ್ಲ. ಅದಕ್ಕಾಗಿ ಬಿಜೆಪಿ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲೂ ತಿರಸ್ಕರಿಸುತ್ತಿದ್ದೇವೆ ಎಂದು ರಾಜುಗೌಡ ಪಾಟೀಲ ಹೇಳಿದರು.
ರವೀಂದ್ರ ಗಾಣಿಗೇರ ಅವರನ್ನು ನೆನೆದ ರಾಜುಗೌಡ:
ಕಳೆದ 40 ವರ್ಷಗಳಿಂದ ಸ್ನೇಹಿತರಾಗಿ ಒಂದೇ ಪಕ್ಷದಲ್ಲಿದ್ದು ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತ ಬಂದಿರುವ ನಾವು ಈಗ ನಮ್ಮ ಸ್ನೇಹಿತನನ್ನು ಕಳೆದುಕೊಂಡಿದ್ದು ಆಘಾತವಾಗಿದೆ ಎಂದು ಮನನೊಂದು ಭಾವುಕರಾಗಿ ರಾಜುಗೌಡ ಪಾಟೀಲ ಮಾತನಾಡುತ್ತ ಕಣೀ್ಣರಿಟ್ಟರು.
ಶತಾಯುಷಿ ಕಲಗೌಡ ಪಾಟೀಲರಿಗೆ ವಾರ್ಡ್ ನಂಬದ 6ರ ಅಭ್ಯರ್ಥಿ ರಂಜನ ಆಧಿನಾಥ ದಾನೊಳ್ಳಿಯವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿಕೊಂಡು ಅವರ ಪಾದಗಳಿಗೆ ಎರಗಿ ಆಶಇರ್ವಾದ ಪಡೆದ ನಂತರ ಶತಾಯುಷಿ ಕಲಗೌಡ ಪಾಟೀಲ ಮಾತನಾಡುತ್ತ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ಮುಂಬರುವ ದಿನಮಾನಗಳಲ್ಲಿ ಮತ್ತೇ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಹೇಳಿ ಅಭ್ಯರ್ಥಿ ರಂಜನ ದಾನೊಳ್ಳಿಗೆ ಆಶೀರ್ವದಿಸಿ ಗೆದ್ದು ಬಾ ಮೊಮ್ಮಗಳೇ ಎಂದು ಶತಾಯುಷಿ ಕಲಗೌಡ ಪಾಟೀಲ ಮನದುಂಬಿ ಆಶೀರ್ವದಿಸಿದರು.
ಸರಸ್ವತಿ ಬ್ಯಾಡಗಿ, ಅರುಣಾ ದಾನೊಳ್ಳಿ, ಸನ್ಮತಿ ದಾನೊಳ್ಳಿ, ಸುಸ್ಮೀತಾ ದಾನೊಳ್ಳಿ, ಶುಭಾಂಗಿ ಪಾಟೀಲ, ಸ್ವಾತಿ ಪಾಟೀಲ, ಪದ್ಮಶ್ರೀ ಪಾಟೀಲ, ಸ್ವಪ್ನಾ ಪಾಟೀಲ, ನಂದಶ್ರೀ ಸವದತ್ತಿ, ಅನೀತಾ ಸವದತ್ತಿ, ಜಯಶ್ರೀ ಗಲಗಲಿ, ವೈಶಾಲಿ ಪಾಟೀಲ, ತ್ರೀಶಲಾ ದಾನೊಳ್ಳಿ, ಶ್ವೇತಾ ಪಾಟೀಲ,
ಮುಖಂಡರಾದ ಅರುಣ ಗಾಣಿಗೇರ, ಪ್ರವೀಣ ಗಾಣಿಗೇರ, ಸಂಜಯ ಕುಚನೂರೆ, ಕುಮಾರ ಅಪರಾಜ, ಗೋಪಾಲ ಮಾನಗಾಂವೆ, ಬಾಬಾಸಾಬ ದಾನೊಳ್ಳಿ, ಬಾಳಾಸಾಬ ದಾನೊಳ್ಳಿ, ರವೀಂದ್ರ ಬ್ಯಾಡಗಿ, ಸುಭಾಷ ದಾನೊಳ್ಳಿ, ರಾಮು ಸವದತ್ತಿ, ಸುನೀಲ ಪಾಟೀಲ, ಅಜೀತ ಯಂಡೋಳ್ಳಿ, ಧರ್ಮಗೌಡ ಪಾಟೀಲ, ಪ್ರೇಮನಾಥ ಉಗಾರೆ, ಸಂದೀಪ ಮಾನಗಾಂವೆ, ಶೀತಲ ಬಾಲೋಜಿ, ಸಂದೀಪ ಮಾನಗಾಂವೆ, ಶಾಂತಿನಾಥ ಡಿಗ್ರಜ, ಗಜುಕುಮಾರ ಪಾಟೀಲ, ರವಿ ದಾನೊಳ್ಳಿ ಸೇರಿದಂತೆ ಅನೇಕರು ಇದ್ದರು.