ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿ: ಅಬ್ದುಲ್ ನಬಿ
ಸಿರುಗುಪ್ಪ 17: ಈಗ ಮಳೆಗಾಲ ಆರಂಭವಾಗುವುದರಿಂದ ಮನೆ ಮುಂದೆ ಹಾಗೂ ಅಕ್ಕಪಕ್ಕ ಸುತ್ತಮುತ್ತ ಪ್ರದೇಶದಲ್ಲಿ ನೀರು ನಿಂತು ಮಲೀನವಾದರೆ ಸೊಳ್ಳೆಗಳ ಉತ್ಪತ್ತಿಯಾಗಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳಬಹುದು ಆದ್ದರಿಂದ ನೀರು ನಿಂತು ಮಲೀನವಾಗದಂತೆ ಜನರೆಲ್ಲರು ನೋಡಿಕೊಳ್ಳಬೇಕು ಪರಿಸರ ಸ್ವಚ್ಛತೆ ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿ ಎಂದು ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬಳ್ಳಾರಿ ಜಿಲ್ಲಾ ಸಾಕ್ಷರತಾ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು ಸಾಮಾಜಿಕ ಸುಧಾರಕ ಎ. ಅಬ್ದುಲ್ ನಬಿ ಅವರು ತಿಳಿಸಿದರು.
ಇಬ್ರಾಹಿಂ ಮಂಜಿಲ್ನಲ್ಲಿ ಅವರು ಅಂತರ ರಾಷ್ಟ್ರೀಯ ಡೆಂಗ್ಯೂ ದಿನವನ್ನು ನೆನಪಿಸಿ ಮಾತನಾಡುತ್ತಾ ಡೆಂಗ್ಯೂ ಜ್ವರದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಬ್ಯಾರಲ್ ಡ್ರಮ್ ಮಡಿಕೆ ಮನೆ ಮೇಲಿನ ಟ್ಯಾಂಕ್ ಇವುಗಳಲ್ಲಿ ಸೊಳ್ಳೆಗಳು ನುಸುಳದಂತೆ ಭದ್ರವಾಗಿ ಮುಚ್ಚಿಡಿ ನೀರನ್ನು ಆಗಾಗ್ಗೆ ಖಾಲಿ ಮಾಡಿ ಆಗಾಗ್ಗೆ ಉಜ್ಜಿ ತೊಳೆದು ಬಳಸಿ ಸೊಳ್ಳೆ ಕಚ್ಚದಂತೆ ಸೊಳ್ಳೆಪರದೆ ಸೊಳ್ಳೆಬತ್ತಿ ಮುಲಾಮು ಇತ್ಯಾದಿ ಉಪಯೋಗಿಸಿಕೊಳ್ಳಿ ಮನೆಯ ಮೇಲೆ ಮತ್ತು ಸುತ್ತಮುತ್ತ ಬಿಸಾಡಿದ ಟೈರು ತೆಂಗಿನ ಚಿಪ್ಪು ಡಬ್ಬಿ ಪ್ಲಾಸ್ಟಿಕ್ ಗ್ಲಾಸ್ ಕಪ್ ಇತ್ಯಾದಿಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಸೂಕ್ತ ರೀತಿಯಲ್ಲಿ ಇದ್ದರೆ ಡೆಂಗಿ ಜ್ವರವನ್ನು ತಡೆಗಟ್ಟಬಹುದು ಯಾವುದೇ ಜ್ವರವಿರಲಿ ನಿರ್ಲಕ್ಷ್ಯಿಸಬಾರದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅಬ್ದುಲ್ ನಬಿ ಹೇಳಿದರು.
ಬಳ್ಳಾರಿ ಮಹಾನಗರದಲ್ಲಿ ರಾಷ್ಟ್ರೀಯ ಡೆಂಗೆ ದಿನಾಚರಣೆ ಅಂಗವಾಗಿ ಕನರ್ಾಟಕ ಸರಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸರ್ವರ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾ ಅರಿವನ್ನು ಆರೋಗ್ಯ ಇಲಾಖೆಯವರು ಆಶಾ ಕಾರ್ಯಕತರ್ೆಯರು ಭಾಗವಹಿಸಿ ಡೆಂಗ್ಯೂ ಮಹಾಮಾರಿ ಬಗ್ಗೆ ಅರಿವು ಮೂಡಿಸಿದರು ಮತ್ತು ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಬೇಕೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು