ರಾಣೆಬೆನ್ನೂರ

ಶೈಕ್ಷಣಿಕ ಸುಧಾರಣೆಗಳು ಆರ್ಥಿಕ ಪ್ರಗತಿಯ ಸಂಕೇತಗಳಾಗಿವೆ : ಬಸವಲಿಂಗಯ್ಯ.

ಶೈಕ್ಷಣಿಕ ಸುಧಾರಣೆಗಳು ಆರ್ಥಿಕ ಪ್ರಗತಿಯ ಸಂಕೇತಗಳಾಗಿವೆ : ಬಸವಲಿಂಗಯ್ಯ.
ರಾಣೇಬೆನ್ನೂರು : ಅ  8 ಸಮಾಜಿಕ ಸುಧಾರಣೆಗೆ  ಗುಣಮಟ್ಟದ ಶೈಕ್ಷಣಿಕ ಯೋಜನೆಗಳು ಆಧಾರ ಸ್ತಂಭವಾಗಿವೆ. ಭವಿಷ್ಯದ ನಿರ್ಮಾತೃಗಳಾದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರಿಂದ ಭವಿಷ್ಯದಲ್ಲಿ ಸೃಜನಶೀಲ ಮಾನವ ಸಂಪನ್ಮೂಲ ರೂಪಗೊಂಡು  ಸಾಂಪ್ರದಾಯಕ ಉದ್ಯೋಗ ಕ್ಷೇತ್ರಗಳಾದ  ಕೃಷಿ  ಗುಡಿ ಕೈಗಾರಿಕಾ ವಲಯದಲ್ಲಿ ಅಗಾಧವಾದ ಧನಾತ್ಮಕ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ಎಂದು ಶಿಕ್ಷಣ ಪ್ರೇಮಿ, ಕೃಷಿ ತಜ್ಞ ಬಸವಲಿಂಗಯ್ಯ ಬಸೇಗಣ್ಣಿ  ಹೇಳಿದರು.

ಅವರು ತಾಲೂಕಿನ ಹನುಮಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು. ಪರಿಸರ ಹಾನಿಯಿಂದಾಗಿ ಇಂದು ಕಾಲಕಾಲಕ್ಕೆ ಮಳೆ ಬಾರದೇ, ಬಂದರು  ಸಮರ್ಪಕವಾಗಿ, ಧರೆಗೆ ಇಳಿಯದ ಕಾರಣ ಇಂದು ಆಹಾರದ ಕೊರಯತೆನ್ನು ನೀಗಿಸಿ  . ನೆಲಮೂಲ ಸಂಸ್ಕೃತಿಯನ್ನು ಮರು ಸ್ಥಾಪನೆ ಮಾಡಲು ಸಾಧ್ಯವಾಗಿ ಜನರ ಜೀವನಮಟ್ಟ ಸುಧಾರಿಸಲು ಅವಕಾಶವಾಗುತ್ತದೆ.  ಎಂದರು.ಹೊಸ ಉದ್ಯೋಗಗಳನ್ನು ಸೃಷ್ಠಿಸಲು ರೈತನು ದಾರಿ ದೀಪವಾಗುತ್ತಾನೆ. ಹಾಗಾಗಿ ಕೃಷಿ ಪ್ರಧಾನ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಇಲಾಖಾ ಅಧಿಕಾರಿಗಳು. ರಾಜಕೀಯ ನಾಯಕರು ಹಾಗೂ ಪೋಷಕರು ಮಕ್ಕಳಲ್ಲಿ ಕೃಷಿಯ ಮಹತ್ವವನ್ನು ತಿಳಿಸಿ ಹೇಳುವ ಅಗತ್ಯವಿದೆ. ಎಂದು ಬಸವಲಿಂಗಯ್ಯ ಬಸೇಗಣ್ಣಿ ಅಭಿಪ್ರಾಯ ಪಟ್ಟರು. ಶಾಲಾ ವಾತಾವರಣ. ಕಲಿಕಾ ಗುಣಮಟ್ಟ ಹಾಗೂ ಶಾಲಾ ಸೌಲಭ್ಯಗಳ ಅಗತ್ಯತೆ ಹಾಗೂ ಮಕ್ಕಳ ಕಲಿಕಾಸಕ್ತಿಯನ್ನು ಕಂಡು ಅಭಿನಂದಿಸಿ ಮತ್ತಷ್ಟು ಪ್ರಗತಿಪೂರಕ ಸಲಹೆ ನೀಡಿದ ಅವರು, ಇಲ್ಲಿನ ವಾತಾವರಣ ಇತರೆ  ಪ್ರೌಢಶಾಲೆಗಳಿಗೆ ಅತ್ಯಂತ ಮಾದರಿಯಾಗಿ, ಪ್ರೇರಣೆಯಾಗಿದೆ. ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಗುರು ಸಿ.ಎಸ್. ಭಗವಂತಗೌಡರ   ಮಾತನಾಡುತ್ತಾ ಸರಕಾರಿ ಶಾಲೆಗೆ ಬರುವ ಮಕ್ಕಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುತ್ತಾರೆ. ಅಂತಹ ಮಕ್ಕಳೂ ಮುನ್ನಲೆಗೆ ಬರಬೇಕಾದರೆ ಸುಲಭ ರೀತಿಯಲ್ಲಿ ಸೌಲಭ್ಯಗಳು ಸಿಗುವಂತಾಗಬೇಕು. ಶಾಲಾ ಶಿಕ್ಷಣದಿಂದ ವಂಚಿತರಾಗದೆ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂದರು. ದವಾಖಾನೆಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಸಿರಿ ಧಾನ್ಯಗಳ ಉತ್ಪನ್ನ ಹೆಚ್ಚಾಗಬೇಕು ಮಕ್ಕಳಲ್ಲಿ ಸದೃಢ ಆರೋಗ್ಯ ರೂಪಿತವಾಗಬೇಕು. ಅದಕ್ಕಾಗಿ ಕರಕುಶಲ ಕೌಶಲ್ಯ ಆಧಾರಿತ ಮೂಲ ಶಿಕ್ಷಣಕ್ಕೆ ಸರಕಾರ ಆದ್ಯತೆ ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು    ಎಸ್ ಡಿ ಎಂ ಸಿ ಅಧ್ಯಕ್ಷರು  ಸದಸ್ಯರು ಉಪಸ್ಥಿತರಿದ್ದರು.  ಶಿಕ್ಷಕರಾದ ಜಗದೀಶ ತೋಟಗೇರ  ವೆಂಕಟೇಶ ಈಡಿಗರ. ಜಗದೀಶ್ ತೋಟಗೇರ. ಮಂಜಪ್ಪ ದೇಸೂರು. ನಿಂಗನಗೌಡ ಪಾಟೀಲ. ಸತೀಶ್ ನ್ಯಾಮಿತಿ. ಪುಷ್ಪಾ ಜೆ ಆರ್ ಗೀರೀಶ್ ಹರಿಹರದ ಹಾಗೂ ಎಸ್ ಡಿ ಎಂ ಸಿ.  ಉಪಾಧ್ಯಕ್ಷ ಮಾಲತೇಶ ಕಂಬಳಿ ಮತ್ತಿತರರು  ಉಪಸ್ಥಿತರಿದ್ದರು.

ಸುದ್ದಿ ಓದಿ