ಮಕ್ಕಳಿಗೆ ಶೈಕ್ಷಣಿಕ ನೆರವು ಹಾಗೂ ಶೈಕ್ಷಣಿಕ ಕಿಟ್ ವಿತರಣೆ ಕಾರ್ಯಕ್ರಮ
ರಾಣಿಬೆನ್ನೂರ:17 ಸಂಸ್ಕಾರ ಭರಿತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಸಮಗ್ರ ವಿಕಸನ ಸಾಧ್ಯ. ಮಕ್ಕಳು ಉತ್ತಮ ಸಂಕಲ್ಪ ಮಾಡಿ ಸಾಧನೆ ತೋರಬೇಕು. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಮುಂದೆ ಓದಿ ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜಕ್ಕೆ ಉಪಕಾರಿಯಾಗಬೇಕು ಎಂದು ದಾವಣಗೆರೆ ಆವರಗೊಳ್ಳ ಮಠದ ಓಂಕಾರ ಸ್ವಾಮೀಜಿ ಹೇಳಿದರು.
ಇಲ್ಲಿನ ದೊಡ್ಡಪೇಟೆಯ ಆವರಗೊಳ್ಳ ಹಿರೇಮಠ ಪಂಚಾಚಾರ್ಯ ಗುರುಕಾರುಣ್ಯ ಮಂಗಲ ಮಂದಿರದಲ್ಲಿ ಈಚೆಗೆ ಲಿಂಗವಂತ ನೌಕರರ ವಧುವರರ ವೇದಿಕೆಯಿಂದ ಏರಿ್ಡಸಿದ ಆರ್ಥಿಕವಾಗಿ ಹಿಂದುಳಿದ ವೀರಶೈವ ಲಿಂಗವಂತ ಸಮಾಜದ ಮಕ್ಕಳಿಗೆ ಶೈಕ್ಷಣಿಕ ನೆರವು ಹಾಗೂ ಶೈಕ್ಷಣಿಕ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸಮೃದ್ಧವಾಗಬೇಕಾದರೆ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮುಂದಿನ ತರಗತಿ ಶಿಕ್ಷಣಕ್ಕೆ ನೆರವಾಗುತ್ತದೆ. ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಂಡರೆ ಬದುಕಿನ ಪರೀಕ್ಷೆಯಲ್ಲಿ ಮಹೋನ್ನತ ಸಾಧನೆಯಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮಾತನಾಡಿ ನಂತರ ವಿಜ್ಞಾನಿ ರಾಮಾನುಜಂ ಅವರ ಸಾಧನೆ ಬಗ್ಗೆ ವಿವರಿಸಿ ಮಕ್ಕಳಿಗೆ ಪ್ರೇರಣೆ ನೀಡಿದರು.
ಇಲ್ಲಿನ ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ವಿರೇಶ ಶಂಕ್ರಯ್ಯ ಬಾಳಿಹಳ್ಳಿಮಠ ಅವರನ್ನು ಉಭಯ ಶ್ರೀಗಳು ಸನ್ಮಾನಿಸಿದರು. ಶಿಕ್ಷಕ ಶಂಭುಲಿಂಗಸ್ವಾಮಿ ಷಡಾಕ್ಷರಿಮಠ ಕಾರ್ಯಕ್ರಮ ಕುರಿತು ಮಾತನಾಡಿದರು.
ವಾಗೀಶ ನೀರಲಗಿಮಠ, ರವಿಕುಮಾರ ಪಾಟೀಲ, ಪ್ರಕಾಶ ಗಚ್ಚಿನಮಠ, ಬಸವರಾಜ ಧೂಳೆಹೊಳಿ, ಉಮ್ಮನಗೌಡ್ರ, ಶಂಭುಲಿಂಗಪ್ಪ ಕಟಗೀಹಳ್ಳಿ, ಹರವೀಶೆಟ್ಟರ, ಎಫ್.ಕೆ. ಭಸ್ಮಾಂಗಿಮಠ, ಶಿವಯೋಗಿಸ್ವಾಮಿ ಹಿರೇಮಠ, ಎಎಸ್ಐ ಕಬ್ಬಿಣಕಂತಿಮಠ, ಎಂ.ಕೆ.ಸಾಲೀಮಠ, ರಾಜು ಬೆಳವಿಗಿಮಠ ಇದ್ದರು.