ಇಂಡಿ

ಶಿಕ್ಷಣ ಮನುಷ್ಯನ ನಡೆ ಮಾನವೀಯ ಬದುಕಿಗೆ ದಾರೀದೀಪ: ಮೂರಮನ್

ಶಿಕ್ಷಣ ಮನುಷ್ಯನ ನಡೆ ಮಾನವೀಯ ಬದುಕಿಗೆ ದಾರೀದೀಪ: ಮೂರಮನ್
ಇಂಡಿ: ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಮನ್ವಯ ಸಮಿತಿ ತಾಲೂಕು ಶಾಖೆ ಇಂಡಿ ಇವರ ವತಿಯಿಂದ ನಡೆದ

ಇಂಡಿ: ಅರ್ಥಿಕ ಹಾಗೂ ಸಾಮಾಜಿಕವಾಗಿ ಬಡವರು, ದಲಿತರು, ಹಿಂದುಳಿದವರು, ತುಳಿತಕ್ಕೆ ಒಳಗಾದವರು ಸಶಕ್ತತೆ ಸಾಧಿಸಲು ಶಿಕ್ಷಣವೇ ಸಾಧನ. ಮಕ್ಕಳಿಗೆ ಶಿಕ್ಷಣ ನೀಡದಿದ್ದರೆ ಆ ಪೋಷಕರು ಶಾಪಗೃಸ್ತರಾಗುತ್ತಾರೆ ಎಂದು ದಲಿತ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಶಿವಾನಂದ ಮೂರಮನ್  ಹೇಳಿದರು. 

ಮಂಗಳವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ  ದಲಿತ ಸಮನ್ವಯ ಸಮಿತಿ  ತಾಲೂಕು ಶಾಖೆ ಇಂಡಿ ಇವರ ವತಿಯಿಂದ ನಡೆದ ಶೈಕ್ಷಣಿಕ ಜಾಗೃತಿ ಮತ್ತು ಸಂಘಟನೆಗಳ  ಪದಾಧಿಕಾರಿಗಳ ಸಮಾರಂಭದಲ್ಲಿ ಮಾತನಾಡಿದರು. 

ಶಿಕ್ಷಣ ಮನುಷ್ಯನ ನಡೆ, ನುಡಿ, ಸಂಸ್ಕಾರ ಮಾನವೀಯ ಬದುಕಿಗೆ ದಾರೀದೀಪವಾಗಿವೆ ಎಂದರು. 

ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕು. ಯುವಕರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದರು. 

ಡಿ.ಎಸ್‌.ಪಿ ಶ್ರೀಧರ ದೊಡ್ಡಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ ಮಾತನಾಡಿದರು. 

ಪೀರ​ಪ್ಪಾ ಕಟ್ಟಿಮನಿ, ಕುಲಂಕಾರ ಶಿಂಗೆ, ಕುಮಾರ ಜೈ ಭೀಮ ನಿಂಬರಗಿ ಮತ್ತಿತರಿದ್ದರು. 

ಸುದ್ದಿ ಓದಿ