ಕೌಶಲ್ಯ ತರಬೇತಿಯಿಂದ ಆರ್ಥಿಕ ಸುಧಾರಣೆ ಸಾಧ್ಯ : ಬಿರಾದಾರ
ಗುಳೇದಗುಡ್ಡ17: ಸರ್ಕಾರ ನೀಡುವ ಕೌಶಲ್ಯ ತರಬೇತಿ ಸೌಲಭ್ಯವನ್ನು ಪಡದುಕೊಂಡು ನೇಕಾರರು ಆರ್ಥಿಕವಾಗಿ ಮುಂದೆ ಬರಬೇಕು. ಕೌಶಲ್ಯ ತರಬೇತಿಯಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಜಿಲ್ಲಾ ಡಿ.ದೇವರಾಜ ಅರಸ ಹಿಂದುಳಿದ ವರ್ಗದ ಇಲಾಖೆಯ ವ್ಯವಸ್ಥಾಪಕ ಎಂ.ಬಿ. ಬಿರಾದಾರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಯುವಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರದ ಜವಳಿ ಇಲಾಖೆ, ಎನ್ಬಿಸಿಎಫ್ಡಿಸಿ, ಎನ್ಎಸ್ಡಿಸಿ ಸ್ಕೀಲ್ ಇಂಡಿಯಾ ಮತ್ತು ಶ್ರೀಜಾ ಎಜ್ಯುಕೇಶನ್ ಹಾಗೂ ವೆಲ್ಫೇರ್ ಸೊಸೈಟಿ ಆಶ್ರಯದಲ್ಲಿ 10 ದಿನಗಳ ತರಬೇತಿಗೆ 30 ಫಲಾನುಭವಿಗಳ ಆಯ್ಕೆ ಶಿಬಿರದಲ್ಲಿ ಮಾತನಾಡಿದರು.
ಸರ್ಕಾರ ಬಡವರ ಹಾಗೂ ದುಡಿಯುವ ವರ್ಗದವರ ಉನ್ನತಿಗಾಗಿ ಅನೇಕ ಯೋಜನೆಗಳನ್ನು ತಂದಿದೆ. ಅದರ ಸದುಪಯೋಗವನ್ನು ಪಡೆದುಕೊಂಡು ನೇಕಾರರು ಉನ್ನತೀಕರಣದ ವ್ಯವಸ್ಥೆಗೆ ಬದ್ಧರಾಗಬೇಕೆಂದು ಹೇಳಿದರು.
ಶ್ರೀಜಾ ಸಿಇಓ ಶ್ರೀನಿವಾಸ ರಾವ್ ಅವರು ಮಾತನಾಡಿ, ಕರ್ನಾಟಕದಲ್ಲಿ ಇದು ಒಂದೇ ಕೇಂದ್ರಕ್ಕೆ ಅನುಮತಿ ದೊರತಿದೆ. ಹಿಂದುಳಿದ ವರ್ಗದ ನೇಕಾರರು ಹೆಚ್ಚು ಲಾಭ ಪಡೆದು ಕೌಶಲ್ಯ ಪಡದು ಆರ್ಥಿಕವಾಗಿ ಮಂದೆ ಬರಬೇಕು ಮತ್ತು ಸರ್ಕಾರದ ಸೌಲಭ್ಯ ಪಡೆಯಬೇಕೆಂದು ಹೇಳಿದರು.
ಬಿ.ಆಯ್.ಯಂಡಿಗೇರಿ ಮಾತನಾಡಿದರು. ನೀಲಕಂಠೇಶ್ವರ ಪಾವರ್ಲೂಮ್ ಸೊಸೈಟಿಯ ಕಾರ್ಯದರ್ಶಿ ಎಂ.ವಿ.ಕಲಕೇರಿ, ಪ್ರಾಚಾರ್ಯ ಶ್ರೀಕಾಂತ ಜೋಶಿ, ಮ್ಯಾನೇಜರ ರಾಜು ಕಟಗೇರಿ, ತರಬೇತುದಾರ ಆದಪ್ಪ ಮುಳಗುಂದ, ದ್ರಾಕ್ಷಾಯಣಿ ವಾಳದಉಂಕಿ, ಶೀವಲೀಲಾ ಮಾನುಟಗಿ ಉಪಸ್ಥಿತರಿದ್ದರು.