ಕಾಗವಾಡ

ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಪ್ರಗತಿ: ಮಾನಸಾ ಪೋತದಾರ

ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಪ್ರಗತಿ: ಮಾನಸಾ ಪೋತದಾರ

ಕಾಗವಾಡ 09: ಸರಕಾರದ ಅನುದಾನವಿಲ್ಲದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ  ಸ್ವ-ಸಹಾಯ ಸಂಘಗಳ ಮಹಿಳೆಯರು ಸಾಲ ಪಡೆದು ಆರ್ಥಿಕ ಸ್ವಾವಲಂಬನೆ ಮೂಲಕ ಸಾಕಷ್ಟು ಪ್ರಗತಿ ಹೊಂದಿದ್ದಾರೆ ಎಂದು ರಾಜ್ಯ ಪ್ರಶಸ್ತಿ ವಿಜೇತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಾನಸಾ ಪೋತದಾರ ಹೇಳಿದರು.

ಗುರುವಾರ ರಂದು ಐನಾಪುರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಕೃಪಾಶೀರ್ವಾದಗಳೊಂದಿಗೆ ಜರುಗುತ್ತಿರುವ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮಕ್ಕಳ ಕೈಗೆ ಸಿಹಿ ಕೊಡಬಾರದು, ಗಂಡಸರ ಕೈಗೆ ಗಂಟು ಕೊಡಬಾರದು, ಏಕೆಂದರೆ ಮಕ್ಕಳ ಕೈಗೆ ಸಿಹಿ ಪದಾರ್ಥ ಕೊಟ್ಟರೆ ಆಗುವ ತನಕ ತಿನ್ನುತ್ತಾರೆ, ಹಾಗೆ ಗಂಡಸರ ಕೈಗೆ ಗಂಟು ಕೊಟ್ಟರೆ ಹಣ ಆಗುವರೆಗೆ ಮನೆಗೆ ಬರುವುದಿಲ್ಲ, ಅದೇ ಹೆಣ್ಣು ಮಕ್ಕಳ ಕೈಗೆ ಕೊಟ್ಟರೆ ಜೋಪಾನವಾಗಿಡುತ್ತಾರೆ ಎಂದರು.

ಡಾ.ವಿರೇಂದ್ರ ಹೆಗ್ಗಡೆಯವರು ಮಾತೋಶ್ರೀಹೇಮಾವತಿ ಅಮ್ಮನವರು ಈ ಭಾಗಗಳಲ್ಲಿ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸದಿದ್ದರೆ ಗಡಿ ಭಾಗದ ಮಹಿಳೆಯರು ಮನೆಗಳಿಗೆ ಸೀಮಿತವಾಗುತ್ತಿದ್ದರು, ಆದರೆ ಈಗ ಪೂಜ್ಯರ ಆಶೀರ್ವಾದದಿಂದ ಮಹಿಳೆಯರು ಸ್ವ-ಸಹಾಯ ಸಂಘಗಳಲ್ಲಿ ಸಾಲ ಪಡೆದು ಹೈನುಗಾರಿಕೆ, ಗುಡಿಗಾರಿಗೆ ತಮ್ತಮ್ಮ ವೃತ್ತಿಯ ಕುಲ ಕಸುಬುಗಳನ್ನು ಮಾಡುತ್ತ ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ  ನೂರಕ್ಕೆ ನೂರರಷ್ಟು ಸಾಲವನ್ನು ಮರುಪಾವತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಾನಸಾ ಪೋತದಾರ ಹೇಳಿದರು.

ಯುವ ಧುರೀಣ ಅರುಣ ಗಾಣಿಗೇರ ಮಾತನಾಡುತ್ತ ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 10 ವರ್ಷಗಳಲ್ಲಿ ಬೆಳಗಾವಿ ಜಿಲ್ಲೆಯ ಸಾವಿರಾರು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದ್ದಾರೆ ಎಂದು ಹೇಳಿದರು.

ಕಾಗವಾಡ ಠಾಣೆಯ ಪಿಎಸ್‍ಐ ಜಾಹೀರ ಮೊಕಾಶಿ ಮಾತನಾಡುತ್ತ ಹೆಣ್ಣು ಮಕ್ಕಳಿಗೆ ಕಾನೂನಿನ ಅರಿವು ಮೂಡಿಸಲು ನಮ್ಮ ಇಲಾಖೆ ಸದಾ ಸಿದ್ಧವಿರುವುದಾಗಿ ಕಾಗವಾಡ ಠಾಣೆಯ ಪಿಎಸ್‍ಐ ಜಾಹೀರ ಮೊಕಾಶಿ ಹೇಳಿದರು. 

ಅತಿಥಿಗಳಾಗಿ ಕಾಗವಾಡ ಠಾಣೆಯ ಪಿಎಸ್‍ಐ ಜಾಹೀರ ಮೊಕಾಶಿ, ಯುವ ಧುರೀಣ ಅರುಣ ಗಾಣಿಗೇರ ಪತ್ರಕರ್ತ ಸುರೇಶ ಕಾಗಲಿ, ಅಶ್ವಿಣಿ ಮಾನೆ, ಸುನಂದಾ ಗಾಣಿಗೇರ, ಸವಿತಾ ದೇಸಾಯಿ, ಪ್ರೀತಿ ಮಸರಗುಪ್ಪಿ, ರೇಷ್ಮಾ ಶೋಭಾ ಮೋಳೆ, ಇದ್ದರು ಸಮನ್ವಯ ಅಧಿಕಾರಿ ದ್ರಾಕ್ಷಾಯಣಿ ಬಿಸ್ವಾಗರ ಸಮಗ್ರ ಮಾಹಿತಿ ನೀಡಿದರು. ಬಸಪ್ಪ ಬಮ್ಮನಾಳ ಸ್ವಾಗತಿಸಿ ವಂದಿಸಿದರು.

ಸುದ್ದಿ ಓದಿ