ಹೂವಿನ ಹಡಗಲಿ

ಸ್ವಾಮಿ ಜಿನ ಬಸದಿಯಲ್ಲಿ ದಸರಾ ಮಹೋತ್ಸವ

ಸ್ವಾಮಿ ಜಿನ ಬಸದಿಯಲ್ಲಿ ದಸರಾ  ಮಹೋತ್ಸವ

ಹೂವಿನ ಹಡಗಲಿ25:  ಪಟ್ಟಣದ ಮಹಾವೀರಶ್ರೀ ಪಾಶ್ವನಾಥ ಸ್ವಾಮಿ ಜಿನ ಬಸದಿಯಲ್ಲಿ ಶರನ್ನವರಾತ್ರಿ  ಒಂಬತ್ತೇನೆ ದಿನದ ಪ್ರಯುಕ್ತ ಜಗನ್ಮಾತೆ ಪದ್ಮಾವತಿ, ಶ್ರೀ ಜ್ವಲಾಮಾಲಿನಿ ಅಮ್ಮನವರಿಗೆ ಪೂಜಾ ಅಲಂಕಾರ ಮಾಡಿ ಭಕ್ತರು ಭಕ್ತಿ ಮೆರೆದರು.   ಸಂಜೆ  - ಪಾಶ್ವನಾಥ ಜೈನ ಸಮಾಜ ಟ್ರಸ್ಟ್‌,  ಜ್ವಾಲಮಾಲಿನಿ ಮಹಿಳಾ ಸಂಘ, ಭಾರತೀಯ ಜೈನ್ ಮಿಲನ್, ಮಹಿಳಾ ಒಕ್ಕೂಟ  ಸಯುಕ್ತ ಆಶ್ರಯ ದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ  ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ವರಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೂ ಹಡಗಲಿ ಭಾರತೀಯ ಜನತಾ ಪಾರ್ಟಿ ಯ ಹಿರಿಯ ನಾಯಕರಾದ ಶ್ರೀ ಓದು ಗಂಗಪ್ಪ ನವರು ನವರಾತ್ರಿ ಜಗನ್ಮಾತೆ ಕಾಳಿ, ಲಕ್ಷ್ಮೀ, ಗೌರಿ ನಾಡಿಗೆ ಶುಭ ತರಲಿ ಹಾಗೂ ಜಿನೇಶ ಸ್ವಾಮಿ ಭಕ್ತ ಗಣಕ್ಕೆ ಸನ್ಮ0ಗಳ ಉಂಟು ಮಾಡಲಿ ಎಂದು ಶುಭಾಶಯಗಳು ತಿಳಿಸಿದರು. 

ಪುರಸಭೆ ಸದಸ್ಯ ಮಂಜುನಾಥ ಜೈನ್,,ಜೈನ ಸಮಾಜದ ಅಧ್ಯಕ್ಷ ಹೆಚ್‌. ಎಸ್‌.ಪ್ರಶಾಂತ್, ಜೈನ್ ಮಿಲನ್ ಅಧ್ಯಕ್ಷ ಸಂತೋಷ್‌. ಜೈನ್ ಉಪಸ್ಥಿತರಿದ್ದು ಜೈನ ಶ್ರಾವಕರು ಭಾಗವಹಿಸಿ ಭಕ್ತಿ ಉತ್ಸವ ಮೆರೆದರು. 


ಸುದ್ದಿ ಓದಿ