ಕಾಗವಾಡ

ದಸರಾ: ಮುತ್ತೈದೆಯರಿಗೆ ಉಡಿ ಅರ್ಪಣೆ

ದಸರಾ: ಮುತ್ತೈದೆಯರಿಗೆ ಉಡಿ ಅರ್ಪಣೆ

ಕಾಗವಾಡ 13: ತಾಲೂಕಿನ ಐನಾಪೂರ ಗ್ರಾಮದ ಭುವನೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಪ್ರತಿವರ್ಷದಂತೆ ಈ ವರ್ಷವು ಹಿಂದೂಗಳ ಪವಿತ್ರ ಹಬ್ಬ ದಸರಾ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. 

ಬುಧವಾರ ದಿ. 13ರಂದು ಐನಾಪುರದ ಗುಡ್ಡದ ಮಡ್ಡಿಯಲ್ಲಿ ದೇವಿಗೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಅಣ್ಣಾಸಾಹೇಬ ಖಟಾವಿ ಮಾತನಾಡುವಾಗ, ಹಿಂದೂ ಸಂಸ್ಕೃತಿಯ ಪಳೆಯುಳಿಕೆಗಳು ನಶಿಸಬಾರದೆಂಬ ಸದುದ್ದೇಶವನ್ನು ಹೊಂದಿರುವ ಭುವನೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಂಡದವರು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ವಿಶೇಷವೆಂದು ಹೇಳಿದರು. 

ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕಾಶಿಮಸಾಬ ಮುಲ್ಲಾ ಮಾತನಾಡಿ ನಾವು ಮುಸ್ಲಿಂ ಬಾಂಧವರು ದುರ್ಗಾಪರಮೇಶ್ವರಿ ದೇವಿ ಸದ್ಭಕ್ತರಾಗಿದ್ದೇವೆ. ಎಲ್ಲ ಕುಟುಂಬದವರು ಒಂದಾಗಿ ಪ್ರತಿದಿನ ಪೂಜೆ ಸಲ್ಲಿಸುತ್ತೇವೆ. ಬೇರೆ ಎಲ್ಲೆಡೆ ಹಿಂದು-ಮುಸ್ಲಿಂ ಬಗ್ಗೆ ಬೇರೆ-ಬೇರೆ ಮಾತನಾಡುತ್ತಾರೆ. ಇಲ್ಲಿಗೆ ನಾವು ಒಂದಾಗಿದ್ದೇವೆ ಎಂದು ಹೇಳಿ ಯಾವ ಜಾತಿ, ಮತ, ಭೇದವಿಲ್ಲದೇ ಎಲ್ಲ ಸಮುದಾಯದ ಮುತ್ತೈದೆಯರನ್ನು ಒಂದೆಡೆ ಸೇರಿಸಿ ಭೋಜನ ಹಾಗೂ ಪಂಗತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರನ್ನು ವೇದಿಕೆಯಡಿ ಗೌರವಿಸುವ ಉಡಿ ತುಂಬುವ ಕಾರ್ಯಕ್ರಮವನ್ನು ಇಡೀ ಗ್ರಾಮೀಣ ಭಾಗದ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ ಎಂದರು. 

ದೇವಸ್ಥಾನ ಕಮೀಟಿ ಸಂಚಾಲಕ ಸುರೇಶ ಕಾಗಲಿ ಮಾತನಾಡುತ್ತ ಈ ವರ್ಷ ಸಹಸ್ತ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿದೆ. ಗುರುವಾರ ಬೆಳಿಗ್ಗೆ ಕುಮಾರಿ ಬಾಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದಸರಾ ಹಬ್ಬದ 9 ದಿನಗಳ ನಂತರ ದೇವಿ ಬಾಲಿಕೆ ರೂಪ ತಾಳುತ್ತಾಳೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ದಸರಾ ಹಬ್ಬ ಯಶಸ್ವಿಗೊಳಿಸಲು ಕಮೀಟಿಯ ಎಲ್ಲ ಸದಸ್ಯರ ವಿಶೇಷ ಸೇವೆ ಕಾರಣಿಭೂತವಾಗಿದೆ ಎಂದರು. 

ಉಡಿ ತುಂಬುವ ಕಾರ್ಯಕ್ರಮದಲ್ಲಿ ಆರತಿ ಕಾಗಲಿ, ಕಲಾವತಿ ಡೊಂಗರೆ, ರಾಣಿ ಲೊಂಡೆ, ಪೂಜಾ ಬೋಗಾರ, ಮಮತಾಜ್ ಕಾಸೀಮ್ ಮುಲ್ಲಾ, ಸಂಗೀತಾ ಖಟಾವಿ, ಧನಶ್ರೀ ಖಟಾವಿ, ವೈಷ್ಣವಿ ಕಾಗಲಿ, ಮಂಗಲ ಕೊಕಟನೂರ, ಲಕ್ಷ್ಮೀ ಸೂರ್ಯವಂಶಿ, ನಂದಾ ಪಾಟೀಲ, ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. 

ಐನಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎ.ಆರ್‌.ಕುಲಕರ್ಣಿ ನಿವೃತ್ತ ಶಿಕ್ಷಕರಾದ ಎಸ್‌.ಆರ್‌.ಕಡಕೋಳಮಠ, ಮುಖಂಡರಾದ ಅರುಣ ಗಾಣಿಗೇರ, ಸುನೀಲ ಅವಟಿ, ಪ್ರಕಾಶ ಕೊರಬು, ತಮ್ಮಣ್ಣ ಪಾರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿದ್ದು ಐನಾಪುರೆ, ಅಣ್ಣಪ್ಪ ಖಟಾವಿ, ರಾವಸಾಬ ಪಾಟೀಲ, ಜಯಪಾಲ ಕೊಕಟನೂರ, ಸುನೀಲ ಡೊಂಗರೆ, ಸಂತೋಷ ಬೋಗಾರ, ಸದಾಶಿವ ಮಡಿವಾಳ, ಹಣಮಂತ ಅಡಿಶೇರಿ, ರಾಜು ವಡಿಯರ, ರಾವಸಾಬ ಅಡಿಶೇರಿ, ವಸಂತ ಸೂರ್ಯವಂಶಿ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ