19ರಂದು ದುರ್ಗಾದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆ
ರಾಣಿಬೆನ್ನೂರು 18: ಇಲ್ಲಿನ ಜನತಾ ಬಜಾರ್ ಬಳಿಯ ದುರ್ಗಾ ವೃತ್ತದಲ್ಲಿ ದುರ್ಗಾದೇವಿ ಉತ್ಸವ ಸಮಿತಿಯ ವತಿಯಿಂದ ನಾಡ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ 33 ನೇಯ ವರ್ಷದ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಅ. 19ರಂದು ಪ್ರತಿಷ್ಠಾಪಿಸಲಿದೆ.
ಅಂದು ಗುರುವಾರ ಸಂಜೆ 4 ಗಂಟೆಗೆ ಬೆಳಗಾವಿಯ ಕಲಾವಿದ ರಾಜೇಂದ್ರ ಜ್ಞಾನದೇವ ವಡವಳಿಕರ ಅವರಿಂದ ತಯಾರಿಸಲಾದ ಆಕರ್ಷಕ ದುರ್ಗಾದೇವಿ ಮೂರ್ತಿಯಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಲಿದ್ದಾರೆ.