ದುರ್ಗಾದೇವಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಅನಾವರಣ
ಲೋಕದರ್ಶನ ವರದಿ
ಶಿಗ್ಗಾವಿ 17: ತಾಲೂಕಿನ ಬಂಕಾಪುರ ಹಾಗೂ ಮುನವಳ್ಳಿ ಗ್ರಾಮಗಳ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ರಾಜ್ಯಮಟ್ಟದ ಜಂಗಿಬೈಲು ಕುಸ್ತಿ ಪಂದ್ಯಾವಳಿಗಳ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಲಾಯಿತು.
ಮುಖಂಡ ಉಮೇಶ ಅಂಗಡಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜ.3 ರಿಂದ 10 ರ ವರೆಗೆ, ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆಯು ನಡೆಯುತ್ತಿದ್ದು, ಸಾತ್ವಿಕ ರೀತಿಯಿಂದ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತದೆ, ಜ. 3 ಮಂಗಳವಾರದಂದು ದುರ್ಗಾದೇವಿಗೆ ಉಡಿ ತುಂಬುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಗಿ, ಜ.5 ದುರ್ಗಾದೇವಿ ಮೆರವಣಿಗೆ, ಜ.6 ಶುಕ್ರವಾರ ಸಮಾರಂಭ ಮತ್ತು ರಾತ್ರಿ 10:30ಗೆ ಡೊಳ್ಳಿನ ಮಜಲು ಕಾರ್ಯಕ್ರಮ ನಡೆಯಲಿದ್ದು, ಜನವರಿ 7, 8 ಮತ್ತು 9ರಂದು ಶ್ರೀ ತೋಪಿನ ದುರ್ಗಾದೇವಿ ಜಾತ್ರಾ ಮತ್ತು ಕುಸ್ತಿ ಕಮಿಟಿ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರ ಸಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ರಾಜ್ಯಮಟ್ಟದ ಜಂಗಿ ಬಯಲು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಇವುಗಳನ್ನು ಸೇರಿದಂತೆ ವಿವಿಧ ಕಲಾತಂಡಗಳಿಂದ ಕಾರ್ಯಕ್ರಮಗಳು ಪ್ರತಿದಿನವೂ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು
ಬಂಕಾಪುರದ ಅರಳಲೇ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು , ಸದಾಶಿವಪೇಟೆಯ ವಿರಕ್ತಮಠದ ಮಲ್ಲಿಕಾರ್ಜು ನ್ ಮಹಾಸ್ವಾಮಿಗಳು, ಬಂಕಾಪುರದ ಕೆಂಡದಮಠದ ಸಿದ್ದಯ್ಯ ಮಹಾದೇವಸ್ವಾಮಿಗಳು, ಸದಾಶಿವಪೇಟೆಯ ಶರಣಬಸವೇಶ್ವರ ದಾಸೋಹಮಠದ ಶಿವದೇವ ಶರಣ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಮಾಲತೇಶ್ ಮುನವಳ್ಳಿ, ಪ್ರತಾಪಸಿಂಗ್ ಶಿವಪ್ಪನವರ್, ಪ್ರಕಾಶ ಚವಿ, ಲಕ್ಷ್ಮಣಸಿಂಗ್ ಆಲದಕಟ್ಟಿ, ಸೋಮನಗೌಡ್ರು ಪಾಟೀಲ, ಪುಟ್ಟಪ್ಪ ಬಳ್ಳಾರಿ, ಈರಪ್ಪ ನಾಗನೂರು, ಮಲ್ಲಪ್ಪ ಕಡಳ್ಳಿ, ಅರ್ಜುನ ಸಿದ್ದಪ್ಪನವರ, ಸುಮಂತ್ ಪೂಜಾರ, ಬಸುರಾಜ್ ಕೂಲಿಹಳ್ಳಿ, ಬಿ.ಜಿ ಕೂಲಿ ವಕೀಲರು, ಉಮೇಶ್ ಪಾನಗರ, ಮುರುಗೇಶಪ್ಪ ಯಲಿಗಾರ, ವೆಂಕಟಸಿಂಗ್ ಪಾಂಡೆ, ನಿಂಗನಗೌಡ ಪಾಟೀಲ, ಬಾಪುಗೌಡ ಪಾಟೀಲ, ಲಕ್ಷ್ಮಣ್ ಪೂಜಾರಿ, ಸೇರಿದಂತೆ ಬಂಕಾಪುರ ಮುನವಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗುರು ಹಿರಿಯರು ಉಪಸ್ಥಿತರಿದ್ದರು.