ಶಿಗ್ಗಾವ್

ಅಕಾಲಿಕ ಮಳೆಯಿಂದ ಲಾಭಕ್ಕಿಂತ ರೈತನಿಗೆ ನಷ್ಟವೇ ಜಾಸ್ತಿ

ಅಕಾಲಿಕ ಮಳೆಯಿಂದ ಲಾಭಕ್ಕಿಂತ ರೈತನಿಗೆ ನಷ್ಟವೇ ಜಾಸ್ತಿ

ಶಿಗ್ಗಾವಿ 10: ಮುಂಗಾರು  ಹಿಂಗಾರು ಮಳೆ ಇಲ್ಲದ್ದುಒಂದು ನೋವು ಬಿತ್ತಿದ ಬೀಜಗೊಬ್ಬರಕ್ಕೆ ಮಾಡಿದ ಸಾಲ ಬಡ್ಡಿ ಸಮೇತ ಬೆಳೆಯುತ್ತಿರುವುದು ಇನ್ನೊಂದು ನೋವು ಅದರ ಮಧ್ಯದಲ್ಲಿ ಮತ್ತೊಂದು ಅಕಾಲಿಕ ಮಳೆ ಬಂದುರೈತನಿಗೆ ಬರಸಿಡಿಲು ಬಡಿದಂತಾಗಿ ರೈತನಿಗೆ ಲಾಭಕ್ಕಿಂತ ಈ ಮಳೆ ನಷ್ಟವೇ ಜಾಸ್ತಿ ಮಾಡಿದೆ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು. 

ರಾಜ್ಯದ್ಯಂತ ಮುಂಗಾರು ಮತ್ತು ಹಿಂಗಾರು ಮಳೆ ವಿಫಲವಾಗಿದ್ದರಿಂದ ರೈತರೆಲ್ಲರೂ ಬಹಳ ಸಂಕಷ್ಟ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡು ರಾಜ್ಯ ಸರಕಾರರೈತರ ಪಂಪ ಸಟ್ಟಿಗೆ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚ ರೈತನೇ ಬರಿಸಬೇಕೆಂದು ಗಾಯದ ಮೇಲೆ ರೈತನಿಗೆ ಬರೆ ಎಳೆದಿದೆ ಎಂದುಆಕ್ರೋಶ ವ್ಯಕ್ತಪಡಿಸಿದರು. ಮಳೆ ಇಲ್ಲದೆ ಬೆಳೆ ಬೆಳೆಯದೆ ಮಾಡಿದ ಸಾಲ ಬಡ್ಡಿ ಬೆಳೆಯುತ್ತಿರುವುದನ್ನು ಕಂಡುರೈತ ಕುಸಿದು ಹೋಗಿದ್ದಾನೆ ಹಿಂಗಾರಿ ಮಳೆಯು ಕೈ ಕೊಟ್ಟಿದ್ದರಿಂದ ಉಣ್ಣಲು ಕೂಡಯಾವುದೇ ಫಸಲುಕಾಣದೆ ಬರಿ ನೆಲ ಬರಿ ಹೊಲ ನೋಡುತ್ತಾರೈತ ಹಣೆಗೆ ಕೈ ಹಚ್ಚಿಕೂಡುವಂತೆ ರೈತನ ಪರಸ್ಥಿತಿಯಾಗಿದೆ ಈಗ ವಾಯು ಭಾರ ಕುಸಿದ ಪರಿಣಾಮ ಅನೇಕ ಕಡೆ ಅಕಾಲಿಕ ಮಳೆ ಬರುತ್ತಿದ್ದುಇದುರೈತರಿಗೆ ಏನು ಪ್ರಯೋಜನವಾಗಿಲ್ಲ  ತೋಟದ ಬೆಳೆಗಳು ಮಳೆಗೆ ನೆಲಕಚ್ಚಿ ಮಣ್ಣುಪಾಲಾಗಿವೆ ನೀರಾವರಿಯಿಂದ ಬೆಳೆದ ಅಲ್ಪ ಸ್ವಲ್ಪ ಬೆಳೆಗಳು ಕೂಡ ಮಣ್ಣು ಪಾಲಾಗಿವೆ ಗೋವುಗಳಿಗೆ ಸಂಗ್ರಹಿಸಿದ ಮೇವು ನೀರು ಪಾಲಾಗಿದೆ  ಹಿಂಗಾರು ಕೃಷಿ ಬಿತ್ತನೆಅವಧಿ ಮುಗಿದು ಹೋಗಿದೆ ಈಗ ಬಿತ್ತಿದರೂ ಹುಟ್ಟಿ ಬೆಳೆದು ಇಳುವರಿ ಬರಲು ಸಾಧ್ಯವೇಇಲ್ಲಎಂದರು. ಇದನ್ನು ಸಂಪೂರ್ಣ ಅರಿತು ಕೂಡಲೇ ಕಾಂಗ್ರೆಸ್ ಸರಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕುರೈತನ ಪಂಪಸಟ್ಟಿಗೆ ಪ್ರತಿದಿನ ಥ್ರೀ ಪೀಸ್ 8 ಘಂಟೆ ವಿದ್ಯುತ್ ನೀಡಬೇಕು ರೈತನ  ಪಂಪ್ ಸಟ್ಟಿಗೆ ವಿದ್ಯುತ್ ಸಂಪರ್ಕ ಸಂಪೂರ್ಣಉಚಿತ ಮಾಡಬೇಕು. ಕೂಡಲೇ ರೈತರಿಗೆ ಪ್ರತಿಎಕರೆಗೆ 50 ಸಾವಿರದಂತೆ ಬೆಳೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಸರಕಾರಕ್ಕೆ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ