ಜನಸಂಖ್ಯಾ ಹೆಚ್ಚಳದಿಂದ ದೇಶದ ಅಭಿವೃದ್ಧಿ ಕುಂಠಿತ: ಪ್ರೊ. ಮಹಮ್ಮದ ಶಫಿ
ರಾಣಿಬೆನ್ನೂರ 14: ಜನಸಂಖ್ಯಾ ಹೆಚ್ಚಳದಿಂದ ದೇಶದ ಅಭಿವೃದ್ಧಿಯು ಕುಂಠಿತವಾಗುತ್ತದೆ. ಆದಕಾರಣ ಜನಸಂಖ್ಯೆ ನಿಯಂತ್ರಿಸುವ ಜಾವಾಬ್ದಾರಿ ಎಲ್ಲರ ಮೇಲಿದೆ ಎಂದು ರಾಣಿಬೆನ್ನೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಮಹಮ್ಮದ ಶಫಿ ಹೇಳಿದರು.
ತಾಲೂಕಿನ ಸುಣಕಲ್ಲ ಬಿದರಿಯ ಅರಳಿ ಶಿದ್ದಿಂಗಪ್ಪ ಬಸಪ್ಪ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಏರಿ್ಡಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಕೆರೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹೇಮಲತಾ.ಕೆ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯಾಯಿಂದ ಹಲವಾರು ಅಪಾಯಗಳು ಎದುರಾಗುತ್ತಿದೆ. ಭೂಮಿಯ ಮೇಲೆ ಅವಶ್ಯಕತೆಗಿಂತಲೂ ಹೆಚ್ಚಿನ ಜನಸಂಖ್ಯೆ ಇದ್ದರೇ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಪ್ರೊ.ಆರ್.ಎಫ್. ಅಯ್ಯನಗೌಡ್ರ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳು ಹಾಗೂ ಮಾನವ ಸಂಪನ್ಮೂಲಗಳಿಂದ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ. ಆದರೆ ಮಾನವ ಸಂಪನ್ಮೂಲ ನಿರ್ವಹಣೆ ಅತಿ ದೊಡ್ಡ ಸವಾಲಾಗಿ ಪರಿಣಾಮಿಸಿದೆ ಎಂದರು.
ಐಕ್ಯೂಎಸಿ ಸಂಯೋಜಕಿ ಲೋಹಿಯಾ ಕೆಜೆಆರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಹುಗ್ಗಿ, ಗ್ರಂಥಪಾಲಕ ಡಾ.ಹನುಮಂತರಾಜು. ಎನ್.ಬಿ, ಮಂಜುನಾಥ.ಎನ್.ಜಿ, ಯಮುನ ನಾಯ್ಕ ಎಂ. ಸಂಯೋಜಕರಾದ ಬಸನಗೌಡ ಮಲ್ಲೂರ, ಕಾಂತಗೌಡ, ಸುದೀಪ ಎಂ.ಜಿ., ಹೇಮಂತ ಬಳಿಗಾರ ಉಪಸ್ಥಿತರಿದ್ದರು.