ರೈಲ್ವೆ ಅಂಡರ್ ಪಾಸಿನಲ್ಲಿ ಭಾರಿ ಮಳೆಯಿಂದಾಗಿ ವಾಹನ ಸವಾರರಿಗೆ ಸಂಚಾರಕ್ಕೆ ಅಡ್ಡಿ
ರಾಣೇಬೆನ್ನೂರು 14: ನಗರದ ಮದ್ಯ ಹಾಯ್ದು ಹೋಗಿರುವ ಬಾಗಲಕೋಟಿ ಬೀಳಿಗಿರಿ ರಂಗನ ಬೆಟ್ಟ ರಾಜ್ಯ ಹೆದ್ದಾರಿಯ ರೈಲ್ವೇ ಗೇಟ ನಂಬರ 219 ಕ್ಕೆ 35ಕೋಟಿ ರೊ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ ಸೇತುವೆಯ ಕಾಮಗಾರಿಯು ನಿರ್ಮಾಣವಾಗುತ್ತಿದ್ದು ಸದರಿ ಕಾಮಗಾರಿ ದಳದ ರೈಲ್ವೆ ಅಂಡರ್ ಪಾಸಿನಲ್ಲಿ ಸತತ ಐದು ದಿನಗಳ ಕಾಲ ನಿರಂತರ ಸುರಿದ ಅಕಾಲಿಕ ಮಳೆಯಿಂದಾಗಿ ಅಂಡರ್ ಪಾಸಿನಲ್ಲಿ ಆಳೆತ್ತರ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನಗಳು ಕಾರು ಟಾಟಾ ಎಸಿ ಆಟೋ ಮುಂತಾದ ಸಣ್ಣ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ, ಈ ರಾಜ್ಯ ಹೆದ್ದಾರಿಗೆ ಪರ್ಯಾಯ ರಸ್ತೆಯಾದ ಮುಕ್ತಿ ಧಾಮದ ಪಕ್ಕದ ರಸ್ತೆಯು ನಗರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು ಸದ್ಯಕ್ಕೆ ಒಂದು ವಾರದಿಂದ ಮುಕ್ತಿತಾಮಹದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು ಎದುರು ಬದುರು ಓಡಾಡುವ ವಾಹನಗಳಿಗೆ ತೀವ್ರ ಅನಾನುಕೂಲವಾಗಿದೆ ಮುಕ್ತಿ ಧಾಮದ ರಸ್ತೆಯು ನಗರ ಸಭೆಯ ವ್ಯಾಪ್ತಿಗೆ ಬರುವುದರಿಂದ ತುರ್ತಾಗಿ ರಸ್ತೆ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಇದೆ ಮುಕ್ತಿ ಧಾಮದ ರಸ್ತೆಯು ದೊಡ್ಡ ದೊಡ್ಡ ತೆಬ್ಬು ಗುಂಡಿಗಳಿಂದ ಕೂಡಿದ್ದು ಮಳೆಗಾಲದಲ್ಲಿ ಇದು ರಸ್ತೆಯು ಅಥವಾ ಕೆಸರು ಗದ್ದೆಯ ಎಂಬುವುದೇ ಗೊತ್ತಾಗುವುದಿಲ್ಲ ಸದರಿ ರಸ್ತೆಯು ಅನೇಕ ಗ್ರಾಮೀಣ ಪ್ರದೇಶಗಳಿಗೆ ಮತ್ತು ಪ್ರಸಿದ್ಧ ಧಾರ್ಮಿಕ ಸ್ಥಳಗಳಾದ ಮೈಲಾರ, ಹಾವನೂರು, ಹೊನ್ನತ್ತಿ, ಚಿಕ್ಕ ಕುರವವತ್ತಿ, ದೇವರಗುಡ್ಡ,ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಬಂದುಹೋಗುತ್ತಾರೆ ಇಂತಹ ಕೆಸರುಗದ್ಯಯಂತ ರಸ್ತೆಯನ್ನ ಕೇವಲ 400 ಮೀಟರ್ ಸಿಸಿ ರಸ್ತೆ ನಿರ್ಮಾಣ ಮಾಡಿದರೆ ದಿನ ನಿತ್ಯ ಹೋಡಾಡುವ ಸಾರ್ವಜನಿಕರಿಗೆ, ರೈತರಿಗೆ ಮತ್ತು ವಿಶೇಷವಾಗಿ ಮುಕ್ತಿದಾಮಕ್ಕೆ ಅಂತ್ಯಸಂಸ್ಕಾರ ಕ್ರಿಯಗೆ ಹೋಗಿ ಬರಲು ತಿವ್ರ ತೊಂದರೆಯಾಗಿದೆ.
ಈ ಕೆಸರುಗದ್ದೆ ರಸ್ತೆಯು ಕಳೆದ 4 ವರ್ಷಗಳಿಂದ ಮಳೆಗಾಲದಲ್ಲಿ ಮೈಯಲ್ಲಾ ಕೆಸರು ಮಾಡಿಕೊಂಡು ವಯೋವೃದ್ದರು, ಮಹಿಳೆಯರು ಬಿದ್ದು ಎದ್ದು ಹೋದ ಅನೇಕ ಘಟನೆಗಳು ಕುರಿತು ರೈಲ್ವೇ ಮೇಲ್ಸತುವೇ ನಿರ್ಮಾಣ ಹೋರಾಟ ಸಮಿತಿ ಸದರಿ ವಿಶಯದ ಕುರಿತು ಅನೇಕ ಬಾರಿ ನಗರ ಸಭೆಯ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ದಿನ ನಿತ್ಯ ಸಂಚಿರಿಸುವ ಸಾರ್ವಜನಿಕರಿಗೆ ಸುರಕ್ಷಿತ ರಸ್ತೆ ನಿರ್ಮಾಣ ಮಾಡುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯದ್ದೇ ಇರವು ಸತ್ಯದ ಅರಿವು ಇದ್ದರು ಜಾಣಕುರುಡುತನ ಪ್ರಧರ್ಶನ ಮಾಡುತ್ತಿರುವದು ನಾಚಿಕೆ ಗೇಡಿನ ಸಂಗತಿ.
ಇದೆ ರೀತಿ ಮೃದೋರಣೆ ಮುಂದುವರಿದರೆ ರೈಲ್ವೇ ಮೆಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯಂದ ನಗರ ಸಭೆ ಮುಂಬಾಗದಲ್ಲಿ ಪ್ರತಿಭಟನೆ ನೆಡೆಸಲು ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಜಗದೀಶ್ ಕೆರೋಡಿ ಎಚ್ಚರಿಸಿದ್ದಾರೆ.