ಸಾಲದ ಭಾಧೆ: ಮುಸ್ಟೂರು ರೈತ ಜಗದೀಶ್ ಆತ್ಮಹತ್ಯೆ, ಪರಿಹಾರಕ್ಕೆ ರೈತ ಮುಖಂಡರ ಒತ್ತಾಯ
ರಾಣೇಬೆನ್ನೂರು 20: ತಾಲ್ಲೂಕಿನ ಮುಸ್ಟೂರು ಗ್ರಾಮದ ರೈತ ಜಗದೀಶ್ ಜಾನಪ್ಪನವರ ಎಂಬ 40 ವರ್ಷದ ರೈತ ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿದ, ಆತನನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಜಗದೀಶ್ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೈತ ರೈತ ಮುಖಂಡ ರವೀಂದ್ರ ಗೌಡ ಪಾಟೀಲ್ ಮಾತನಾಡಿ ಸೆ 19ರಂದು ಮಂಗಳವಾರ ಮುಷ್ಟೂರು ಗ್ರಾಮದಲ್ಲಿ ರೈತನ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪತ್ನಿ ಮತ್ತು ಇಬ್ಬರು ಸಣ್ಣ ಸಣ್ಣ ಮಕ್ಕಳು ಹಾಗೂ ತಾಯಿ ಸಹೋದರಿಯರನ್ನು ಅಗಲಿದ ಜಗದೀಶ್ ತಾಲೂಕಿನ ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6 ಲಕ್ಷ ಸಾಲ ಪಡೆದಿದ್ದು. ಕೈಗಳ ಹಾಗೂ ಇನ್ನಿತರ ಮೂಲಗಳಿಂದ 4 ಲಕ್ಷ ಹೀಗಾಗಿ ಒಟ್ಟು 10 ಲಕ್ಷ ಸಾಲ ಮಾಡಿದ್ದ ರೈತ.
ಕಳೆದ ಬಾರಿ ಅತಿವೃಷ್ಟಿಯಿಂದ ತನ್ನ ಬೆಳೆ ನಾಶಗೊಂಡಿತ್ತು ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಹೊಲದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ನಾಶವಾಗಿದ್ದರಿಂದ ಚಿಂತಾ ಕ್ರಾಂತನಾಗಿದ್ದ. ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಆದರೂ ಕೂಡ ರೈತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ. ದೇಶದ ರೈತರ ಋಣ ತೀರಿಸಬೇಕು. ಈ ದೇಶದ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಕೋಟಿ ಕೋಟಿ ಸಾಲವನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರ. ಜಗದ ಪ್ರತಿ ಜೀವಿಗೆ ಅನ್ನ ನೀಡುವ ಅನ್ನದಾತನ ಕೃಷಿ ಚಟುವಟಿಕೆಗೆಂದು ಮಾಡಿದ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ದೇಶದ ರೈತನ ಋಣ ತೀರಿಸಬೇಕು. ರೈತರೂ ಕೂಡ ಎಂಥಾ ಸಂದರ್ಭ ಬಂದರೂ ಆತ್ಮ ಹತ್ಯೆ ಮಾಡಿಕೊಳ್ಳುವಂಥ ಹೇಯ ಕೃತ್ಯಕ್ಕೆ ಕೈ ಹಾಕಬಾರದು. ರೈತರು ಆತ್ಮಸ್ಥೈರ್ಯದಿಂದ ಬದುಕಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಸಂಕಷ್ಟದಲ್ಲಿರುವ ಇಂಥ ರೈತರನ್ನು ಗುರುತಿಸಿ ಅವರಿಗೆ ಸರಕಾರದಿಂದ ಸಿಗುವಂತಹ ನೆರವನ್ನ ನೀಡಬೇಕಿದೆ. ಕಿರುಕುಳ ನೀಡುತ್ತಿರುವ ಸಾಲಗಾರರ ಮೇಲೆ ನಿಗಾ ಇಟ್ಟು. ರೈತರ ನೆರವಿಗೆ ದಾವಿಸಬೇಕು. ಸರ್ಕಾರ ಕೂಡಲೇ ಈ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.