ಯರಗಟ್ಟಿ

ನಾಲ್ಕು ಟ್ರ್ಯಾಕ್ಟರ್ ಟ್ರೇಲರ್ ಜಗ್ಗುವ ಸ್ಪರ್ಧೆಗೆ ಚಾಲನೆ

ನಾಲ್ಕು ಟ್ರ್ಯಾಕ್ಟರ್ ಟ್ರೇಲರ್ ಜಗ್ಗುವ ಸ್ಪರ್ಧೆಗೆ ಚಾಲನೆ

ಲೋಕದರ್ಶನ ವರದಿ 


ಯರಗಟ್ಟಿ 02: ಗೌರಿ ಗಣೇಶ ಚತುರ್ಥಿ ಅಂಗವಾಗಿ ಗಜಾನನ ಕಮೀಟಿ ಮಿಕಲಿ ಓಣಿ ಇವರ ಆಶ್ರಯದಲ್ಲಿ ಆಯೋಜಿಸಿದ್ದ ನಾಲ್ಕು ಟ್ರ್ಯಾಕ್ಟರ್ ಟ್ರೇಲರ್ ಜಗ್ಗುವ ಸ್ಪರ್ಧೆ ಉದ್ಘಾಟಿಸಿದ ನಿವೃತ್ತ ಶಿಕ್ಷಕ ಎನ್‌. ಕೆ. ಹುಚ್ಚರಡ್ಡಿ.  


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎನ್‌. ಕೆ. ಹುಚ್ಚರಡ್ಡಿ ಭಾರತೀಯ ಕ್ರೀಡೆಯಲ್ಲಿ ಗ್ರಾಮೀಣ ಕ್ರೀಡೆಯಾದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ಕೂಡಾ ಒಂದು.  

ಇತ್ತೀಚಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವುದು ವಿಷಾದನೀಯ.  

ಯುವಕರು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಿ ಆ ಕ್ರೀಡೆಗಳನ್ನು ಉಳಿಸಿ, ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು. 

ಎಚ್‌. ಎಲ್‌. ವಜ್ರಮಟ್ಟಿ, ರಾಜೇಂದ್ರಗೌಡ ಪಾಟೀಲ, ಹನಮಂತಪ್ಪ ಮಿಕಲಿ, ಕೃಷ್ಣಪ್ಪ ಮಿಕಲಿ, ವಿ. ಜಿ. ದೇವಡ್ಡಿ, ಸುರೇಶ ವಂಟಗೋಡಿ, ಶಶಾಂಕ ಗಲಬಿ, ಸಂತೋಷ ಪಾಳೇಕರ, ನಾಗಪ್ಪ ತೋರಣಗಟ್ಟಿ, ನವೀನ ತೋಟಗಿ, ರಮೇಶ ಫಾಟೀಲ, ವೆಂಕಟೇಶ ದೇವರಡ್ಡಿ, ಬಸಪ್ಪ ಗಂಗರಡ್ಡಿ, ಎಚ್‌. ಕೆ. ಮಿಕಲಿ, ರಂಗಯ್ಯ ಅಂಬಲಝರಿ, ವೆಂಕಪ್ಪ  ದೇವರಡ್ಡಿ, ಗೋವಿಂದ ದೇವರಡ್ಡಿ, ಗೀರೀಶ ಪಾಟೀಲ ಸೇರಿದಂತೆ ಪಟ್ಟಣದ ಗಣ್ಯಮಾನ್ಯರು ಹಾಗೂ ಹಿರಿಯರು, ಗಜಾನನ ಉತ್ಸವ ಕಮೀಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ