ಫೇವರ ಬ್ಲಾಕ್, ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ
ಗೋಕಾಕ ನವೆಂಬರ್ 04: ಸಚಿವರಾದ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಗರದ ಸವಾರ್ಂಗೀಣ ಬೆಳೆವಣಿಗೆ ಶ್ರಮಿಸುವುದಾಗಿ ನೂತನ ನಗರಸಭೆ ಅಧ್ಯಕ್ಷ ಜಯಾನಂದ ಹಣಚ್ಯಾಳಿ ಹೇಳಿದರು.
ಮಂಗಳವಾರದಂದು ನಗರದ ವಾರ್ಡ್ 29 ರಲ್ಲಿ ನಗರಸಭೆಯ 14ನೇ ಹಣಕಾಸು ಯೋಜನೆ ಅಡಿಯಲ್ಲಿ 36 ಲಕ್ಷ ರೂಗಳ ವೆಚ್ಚದ ಫೇವರ ಬ್ಲಾಕ್ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಚಿವರು ಹಲವಾರು ಬೃಹತ್ ಯೋಜನೆಗಳ ಅನುμÁ್ಠನದೊಂದಿಗೆ ನಗರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವುಗಳ ಸದುಪಯೋಗದೊಂದಿಗೆ ಸಚಿವರಿಗೆ ಸಹಕಾರ ನೀಡಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸಹಕರಿಸೋಣಾ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅರೆನ್ನವರ, ಸದಸ್ಯರುಗಳಾದ ಅಬ್ದುಲರಹೇಮಾನ ದೇಸಾಯಿ, ಲಕ್ಷ್ಮೀ ದೇಶನೂರ, ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರುಗಳಾದ ಜ್ಯೋತಿಭಾ ಸುಭಂಜಿ, ದುರ್ಗಪ್ಪಶಾಸ್ತ್ರಿ ಗೋಲ್ಲರ, ಬಸವರಾಜ ಮಾಳಗಿ, ಮಲ್ಲಿಕಾರ್ಜುನ ಹೊಸಪೇಠ, ಪ್ರವೀಣ್ ಚುನಮರಿ, ರಾಜು ಜೊರಾಪೂರ ಸೇರಿದಂತೆ ಅನೇಕರು ಇದ್ದರು.