ಹೂವಿನ ಹಡಗಲಿ

ಈದ್ ಮಿಲಾದ್ ಸಂಭ್ರಮದ ಮೆರವಣಿಗೆಗೆ ಚಾಲನೆ

ಈದ್ ಮಿಲಾದ್ ಸಂಭ್ರಮದ ಮೆರವಣಿಗೆಗೆ  ಚಾಲನೆ

ಹೂವಿನಹಡಗಲಿ 16 : ಪ್ರವಾದಿ ಮಹಮ್ಮದ್ ಪೈಗಂಬರ ಜನಿಸಿದ ದಿನವನ್ನು ಶಾಂತಿ, ಸೌಹಾರ್ದದ ಪ್ರತೀಕವಾಗಿ ಈದ್ ಮಿಲಾದ್ ಹಬ್ಬವಾಗಿ ಮುಸ್ಲಿಮರು ಸೋಮವಾರ ಸಡಗರದಿಂದ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಪಟ್ಟರು. ಬೆಳಿಗ್ಗೆ ಫಾತೇಹಖಾನಿ (ಪ್ರಾರ್ಥನೆ) ಓದಲಾಯಿತು. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈದ್ ಮಿಲಾದ ಕಮಿಟಿ ಅದ್ಯಕ್ಷ ಸದ್ದಾಂ ಹುಸೇನ್, ಉಪಾದ್ಯಕ್ಷ ಜಿ.ಮುದೀಸ್, ಖಜಾಂಚಿ ಮಹ್ಮದ್ ರಫಿ ಮುಖಂಡರಾದ ಕೆ.ಗೌಸ್ ಮೊಹಿದ್ದೀನ್, ಶೇಖ್ ಮಹ್ಮದ್, ಶಫಿವುಲ್ಲಾ  ಬಡೇಸಾಹೇಬ್ ಇದ್ದರು. 


ಸುದ್ದಿ ಓದಿ