ಗುಳೇಗುಡ್ಡ

ಚಾಲಕರೇ ಹುಷಾರು! ಯಾಮಾರಿದರೆ ಪ್ರಾಣ ಹಾನಿ

ಚಾಲಕರೇ ಹುಷಾರು! ಯಾಮಾರಿದರೆ ಪ್ರಾಣ ಹಾನಿ
ಬಿಸಿಲಿನ ತಾಪಕ್ಕೆ ವಾಹನದ ಕೆಳಗಡೆ ನಾಯಿ ಹಾಗೂ ಮರಿಗಳು.

ಗುಳೇದಗುಡ್ಡ 25: ಬಿಸಿಲಿನ ತಾಪ ದಿನೆದಿನೆ ಹೆಚ್ಚುತ್ತಲೇ ನಡೆದಿದೆ. ಪ್ರಾಣಿ, ಪಕ್ಷಿಗಳು ಬಿಸಿಲಿನ ತಾಪಕ್ಕೆ ನಲುಗಿ ಹೋಗುತ್ತಿವೆ. ನೆರಳು ಕಂಡಲ್ಲಿ ಆಸರೆಗೆ ಹೋಗುತ್ತಿವೆ. ಆದರೆ ಈ ನೆರಳಿನ ಆಸರೆಯೇ ಕೆಲವೊಮ್ಮೆ ಅವುಗಳ ಪ್ರಾಣಕ್ಕೂ ಕುತ್ತು ತರಬಹುದಲ್ಲ!

ಹೌದು. ಬಹುತೇಕವಾಗಿ ಪ್ರಾಣಿಗಳು ನೆರಳಿರುವ ಜಾಗೆಗಳನ್ನು ತಮ್ಮ ವಿಶ್ರಾಂತಿಗೆ ಬಯಸುವುದುಂಟು. ಅದರಲ್ಲಿಯೂ ರಸ್ತೆ ಮೇಲೆ ಅಥವಾ ಪಕ್ಕದಲ್ಲಿ ಒಂದೆರಡು ತಾಸು ವಾಹನಗಳು ನಿಂತರೆ ಸಾಕು, ನಾಯಿ, ಬೆಕ್ಕು, ಕೋಳಿ, ಸೇರಿದಂತೆ ಇನ್ನೂ ಕೆಲ ಪ್ರಾಣಿಗಳು ವಾಹನದ ಕೆಳಗಡೆ ವಿಶ್ರಮಿಸುತ್ತವೆ. ಇದು ಅಪಾಯಕಾರಕವೇ ಸರಿ. ಆದರೂ ಬೇಸಿಗೆಯ ಈ ದಿನಗಳಲ್ಲಿ ವಾಹನ ಚಾಲಕರು ವಾಹನಗಳನ್ನು ನಿಲ್ಲಿಸಿ ಮತ್ತೆ ಚಾಲು ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವಿದೆ. 

ಅದೇನೆಂದರೆ, ನಿಲ್ಲಿಸಿದ ತಮ್ಮ ವಾಹನದ ಕೆಳಗೆ ಯಾವುದಾದರೂ ಪ್ರಾಣಿ, ಪಕ್ಷಿ ಮಲಗಿದೆಯೋ ಅಥವಾ ಬಿಸಿಲಿನ ತಾಪಕ್ಕೆ ವಿಶ್ರಮಿಸುತ್ತಿದೆಯೋ ಎಂದು ಒಂದು ನಿಮಿಷ ನೋಡಿ ವಾಹನ ಚಲಾಯಿಸಿದರೆ ಅಮಾಯಕ ಪ್ರಾಣಿಗಳ ಜೀವ ಉಳಿಸಿದಂತಾಗುತ್ತದೆ ಎಂದು ಇಲ್ಲಿನ ಪ್ರಾಣಿಪ್ರಿಯ ಅಶೋಕ ಹೆಗಡಿ, ಗುಂಡಣ್ಣ ಕೋಟಿ ಚಾಲಕರಲ್ಲಿ ಕೇಳಿಕೊಂಡಿದ್ದಾರೆ.

ಸುದ್ದಿ ಓದಿ