ಮಹಿಳೆಯ ಸಾವಿಗೆ ಕಾರಣನಾದ ಚಾಲಕನಿಗೆ ದಂಡಾ ಮತ್ತು ಶಿಕ್ಷೆ, ತೀರ್ಪು ಪ್ರಕಟ
ರಾಣಿಬೆನ್ನೂರು 29: ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಮಹಿಳೆಯ ಸಾವಿಗೆ ಕಾರಣನಾದ ಚಾಲಕನಿಗೆ ದಂಡ ಮತ್ತು ಶಿಕ್ಷೆ ವಿಧಿಸಿ ಸ್ಥಳೀಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ತೀಪು ನೀಡಿದ್ದಾರೆ. ದಾವಣಗೆರೆ ತಾಲೂಕು ಶ್ರೀರಾಮಗೊಂಡನಹಳ್ಳಿ ಗ್ರಾಮದ ಶ್ರೀನಿವಾಸ ಎಸ್.ಎನ್., ತಂದೆ ನಾರಾಯಣಸ್ವಾಮಿ ಶಿಕ್ಷೆಗೊಳಗಾದ ಶಿಕ್ಷೆಗೊಳಗಾದ ಚಾಲಕ. ಆರೋಪಿ ಚಾಲಕನು ಚಾಲನಾ ಪರವಾನಿಗೆ ಪತ್ರ ಹೊಂದಿಲ್ಲದೆ ಮತ್ತು ವಿಮೆ ಮಾಡಿಸದ ಮಾರುತಿ ಓಮಿನಿ ಕಾರನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಾಲೂಕಿನ ಕಮದೋಡ ಬಳಿಯ ಮಹಿಕೋ ಫ್ಯಾಕ್ಟರಿ ಹತ್ತಿರ ಎದುರುಗಡೆಯಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಯಿಸಿದ್ದನು. ಘಟನೆಯಲ್ಲಿ ಬೈಕ್ನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಗುಡ್ಡದಬೇವಿನಹಳ್ಳಿಯ ಸಬಿಯಾಬಾನು ತಂದೆ ಹುಸೇನ್ಸಾಬ ಬಡಿಗೇರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಬೈಕ್ ಸವಾರ ಹರಪನಹಳ್ಳಿಯ ಸಲೀಂ ತಂದೆ ಅಬ್ದುಲ್ರೆಹಮಾನ್ ಗಾಯಗೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಆರೋಪಿ ಚಾಲಕನಿಗೆ ಕ7 ಸಾವಿರ ದಂಡ ಮತ್ತು ಒಂದು ವರ್ಷದ ಸಾಧಾ ಸ್ವರೂಪದ ಶಿಕ್ಷೆ ವಿಧಿಸಿ ತೀಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಶಿದ್ನೋರಕರ ಮಂಡಿಸಿದ್ದರು.