ಕಾಗವಾಡ

ಪೋಷಣ ಅಭಿಯಾನ ವಾಹನಕ್ಕೆ ಚಾಲನೆ

ಪೋಷಣ ಅಭಿಯಾನ ವಾಹನಕ್ಕೆ ಚಾಲನೆ

ಕಾಗವಾಡ: ಕಾಗವಾಡದ ಶಿಶು ಅಭಿವೃದ್ಧಿ ಯೋಜನೆ ರಾಷ್ಟ್ರಿಯ ಪೋಷಣ ಅಭಿಯಾನ ಯೋಜನೆಯಡಿ ಅಖಂಡ ಭಾರತದಲ್ಲಿ ಪೋಷಣ ಮಾಹೆಯನ್ನು ಹಬ್ಬದಂತೆ ಆಚರಣೆ ಮಾಡಲಾಯಿತು. 

ಗುರುವಾರ ದಿ. 1ರಂದು ಕಾಗವಾಡದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿಯು ಪೋಷಣ ಅಭಿಯಾನ ಯೋಜನೆಯಡಿ ಇದೆ ಸೆಪ್ಟೆಂಬರ ತಿಂಗಳನ್ನು ಪೋಷಣ ಮಾಹೆಯಾಗಿ ಆಚರಿಸುತ್ತಿದ್ದು, ದಿ.01 ರಿಂದ 31 ರ ವರೆಗೆ ವಿವಿಧ ರೀತಿಯ ಪೌಷ್ಠಿಕ ಮೇಳ ಅಪೌಷ್ಠಿಕತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರಲ್ಲಿ ಪೋಷಣೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವುದರ ಬಗ್ಗೆ ಸಾರ್ವಜನಿಕರಲ್ಲಿ ಇದರ ಬಗ್ಗೆ ತಿಳುವಳಿಕೆ ಬಂದಲ್ಲಿ ದೇಶದ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.        

ಯೋಜನೆಯ ನಿಟ್ಟಿನಲ್ಲಿ ಇಂದು ಕಾಗವಾಡ ತಾಲೂಕಿನಲ್ಲಿಯೂ ಪೋಷಣ ಅಭಿಯಾನ ಯೋಜನೆಯಡಿ ಪೋಷಣ ವಾಹನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ತಹಶೀಲ್ದಾರ ರಾಜೇಶ ಬುರ್ಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಜೀವಕುಮಾರ ಸದಲಗೆ, ತಾಲೂಕ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ, ಮೇಲ್ವಿಚಾರಕಿಯರು, ಪೋಷಣ ಅಭಿಯಾನ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೇಯರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. 


ಸುದ್ದಿ ಓದಿ