ವಿವಿಧ ಕಾಮಗಾರಿಗೆ ಸಚಿವ ಶ್ರೀಮಂತ ಪಾಟೀಲ ಚಾಲನೆ
ಕಾಗವಾಡ 19: ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ, ಅಂಗನವಾಡಿ ಕಟ್ಟಡ, ಭವನ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಬೇರೆ-ಬೇರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 7.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಕಾಗವಾಡ ಶಾಸಕರು ಹಾಗೂ ರಾಜ್ಯದ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರು ಚಾಲನೆ ನೀಡಿದರು.
ಮಂಗಳವಾರ ಬೆಳಿಗ್ಗೆಯಿಂದ ಕಾಗವಾಡ ಕ್ಷೇತ್ರದ ಶಿರಗುಪ್ಪಿ, ಕಲ್ಲಾಳ್, ಮಂಗಸೂಳಿ, ಐನಾಪುರ, ಬಣಿಜವಾಡ, ಮೋಳೆ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಸಚಿವ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ರಾಜ್ಯ ಸರಕಾರದ ವಿಶೇಷ ಅನುದಾನದಿಂದ ಉಗಾರ-ಕುಡಚಿ ಮಧ್ಯದ ರಸ್ತೆ ನಿರ್ಮಾಣಕ್ಕಾಗಿ 2 ಕೋಟಿ, ಮೋಳೆ-ತಂಗಡಿ ಮಧ್ಯದ ರಸ್ತೆ ನಿರ್ಮಾಣಕ್ಕಾಗಿ 2 ಕೋಟಿ, ಬಣಿಜವಾಡ-ಐನಾಪುರ ಮಧ್ಯದ ರಸ್ತೆ ನಿರ್ಮಾಣಕ್ಕಾಗಿ 1 ಕೋಟಿ, ಶಿರಗುಪ್ಪಿ-ಜುಗೂಳ ಮಧ್ಯದ ರಸ್ತೆ ನಿರ್ಮಾಣಕ್ಕಾಗಿ 30 ಲಕ್ಷ, ಶಿರಗುಪ್ಪಿ ಗ್ರಾಮದ ಅಂಗನವಾಡಿ ಕಟ್ಟಡಕ್ಕಾಗಿ 17 ಲಕ್ಷ, ಶೇಡಬಾಳ-ಕಲ್ಲಾಳ್ ಮಾರ್ಗದ ಎಸ್.ಟಿ ಸಮಾಜದ ಓಣಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 1 ಕೋಟಿ, ಮರಗುಬಾಯಿ ಮಂದಿರ ನಿರ್ಮಾಣಕ್ಕಾಗಿ 19 ಲಕ್ಷ ಹೀಗೆ 7.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬೇರೆ-ಬೇರೆ ಕಾಮಗಾರಿಗಳಿಗೆ 7.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇನ್ನೂ ಬೇರೆ-ಬೇರೆ ಇಲಾಖೆಗಳಿಂದ ಕಾಮಗಾರಿಗಳು ಮಂಜೂರುಗೊಂಡಿವೆ. ಅದನ್ನು ಕೂಡ ಶೀಘ್ರದಲ್ಲಿ ಉದ್ಘಾಟನೆ ನೆರವೇರಿಸುತ್ತೇನೆ. ಮತಕ್ಷೇತ್ರದ ಅಭಿವೃದ್ಧಿ ಒಂದೇ ಗುರಿಯಾಗಿದೆ. ಇಲ್ಲಿಯ ಜನರು ಅಭಿವೃದ್ಧಿಗಾಗಿ ಸಹಕರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಲೊಕೋಪಯೋಗಿ ಇಲಾಖೆಯ ಅಭಿಯಂತರರಾದ ಜೆ.ಎ.ಹಿರೇಮಠ, ಆರ್.ಪಿ.ಅವತಾಡೆ, ಎಂ.ಎಸ್.ಮಗದುಮ್ಮ, ನಾನಾಸಾಹೇಬ ಅವತಾಡೆ, ತಮ್ಮಣ್ಣಾ ಪಾರಶೆಟ್ಟಿ, ಶಿರಗುಪ್ಪಿಯ ನ್ಯಾಯವಾದಿ ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ರಾಮಗೌಡಾ ಪಾಟೀಲ, ಉತ್ಕರ್ಶ ಪಾಟೀಲ, ಎಂ.ಬಿ.ಪಾಟೀಲ, ಸಚೀನ ವಸವಾಡೆ, ಭಮ್ಮಣ್ಣಾ ಚೌಗುಲೆ, ರಮಾಕಾಂತ ಬಾಡಗೆ, ವಿಜಯಕುಮಾರ ಅಕಿವಾಟೆ, ಸುಭಾಷ ಮೋನೆ, ದೀಪಕ ಪಾಟೀಲ, ಕಾಕಾ ಪಾಟೀಲ, ಶೇಡಬಾಳದ ಭರತೇಶ್ವರ ಪಾಟೀಲ, ಅಣ್ಣಾಗೌಡಾ ಪಾಟೀಲ, ಡಾ. ಧವಲಕುಮಾರ ಭೋಮಾಜ, ಸಂತೋಷ ಪಾಟೀಲ, ಈಶ್ವರ ಕುಂಬಾರೆ, ರಾಜು ಮುಲ್ಲಾ, ಲಕ್ಷ್ಮಣ ವಡ್ಡರ, ಬಾಬಾಸಾಬ ಪಾಟೀಲ ಸಚಿವರ ಆಪ್ತ ಸಹಾಯಕರಾದ ವಿನಾಯಕ ಶಿಂಧೆ, ರಾಜು ಮಾನೆ, ಉಗಾರ ಪುರಸಭೆ ಅಧ್ಯಕ್ಷ ಮಂಜುನಾಥ ತೇರದಾಳೆ, ಪ್ರಫುಲ್ ಥೋರುಶೆ, ಯೊಗೇಶ ಕುಂಬಾರ, ದಾದಾಗೌಡಾ ಪಾಟೀಲ, ಸಂಜಯ ತೇಲಸಂಗ, ಸೇರಿದಂತೆ ಅನೇಕರು ಇದ್ದರು.