ಐನಾಪುರ ದುರ್ಗಾ ಮೂರ್ತಿಯ ಆಕರ್ಷಕ ಮೆರವಣಿಗೆಗೆ ಚಾಲನೆ
ಕಾಗವಾಡ 29: ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವ, ಪುರಾಣ, ಪ್ರವಚನಗಳಂತ ಕಾರ್ಯಗಳನ್ನು ಮಾಡುವ ಮೂಲಕ ಜನರಲ್ಲಿ ನಮ್ಮ ದೇಶದ ಕಲೆ, ಸಂಸ್ಕೃತಿ, ಸಂಪ್ರದಾಯ, ಸಾಹಿತ್ಯ, ಧಾರ್ಮಿಕ ಭಾವನೆಗಳನ್ನು ಜಾಗೃತಿಗೊಳಿಸುವ ಕೆಲಸ ಮಠ ಮಂದಿರಗಳು ಮಾಡುತ್ತಿವೆ ಎಂದು ಪಟ್ಟಣ ಪಂಚಾಯತ ಸದಸ್ಯ ಪ್ರವೀಣ ಗಾಣೀಗೇರ ಹೇಳಿದರು.
ಅವರು ಐನಾಪುರ ಪಟ್ಟಣದ ಓಂಶಕ್ತಿ ದುರ್ಗಾ ಪರಮೇಶ್ವರಿ ಸೇವಾ ಸಮೀತಿ ಆಯೋಜಿಸಿದ ನವರಾತ್ರಿ ಸಂಭ್ರಮಹಿ ದುರ್ಗೆಯ ಮೂರ್ತಿಯ ಆಕರ್ಷಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ದೇವಿ ಪುರಾಣ ಅಲ್ಲ ಇದು ದೇಹದ ಪುರಾಣ. ಆದಕಾರಣ ನಾವು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.ತುಳಜಾಪುರದ ಜ್ಯೋತಿ ಬೆಳಗಿಸಿದರು. ದುರ್ಗಾಪರಮೇಶ್ವರಿ ಮೆರವಣಿಗೆಗೆ ಪಪಂ ಸದಸ್ಯ ಅರುಣ ಗಾಣಿಗೇರವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಗುಡ್ಡದ ಮಡ್ಡಿಯಲ್ಲಿ ದುರ್ಗೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಸುಮಾರು 13 ವರ್ಷಗಳಿಂದ ದಸರಾ ಕಾರ್ಯಕ್ರಮದ ನಿಮಿತ್ತವಾಗಿ ದೇವಿ ಆರಾಧನಾ, ವಿಧಿ ವಿಧಾನಗಳು, ಪೂಜಾ ಕಾರ್ಯಕ್ರಮ ಬಾಲ ಮುತೈದೆಯರಿಗೆ, ಸುಮಂಗಲಯರಿಗೆ ಉಡಿತುಂಬುವ, ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಓಂ ಶಕ್ತಿ ದುರ್ಗಾಪರಮೇಶ್ವರಿ ಸೇವಾ ಸಮೀತಿ ಸದಸ್ಯರು ತಿಳಿಸಿದ್ದಾರೆ.