ರಾಣೆಬೆನ್ನೂರ

ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ

ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ

ರಾಣೀಬೆನ್ನೂರು 28: ರಕ್ತದಾನ ಮಹಾದಾನ ಪ್ರತಿಯೊಬ್ಬರು ರಕ್ತದಾನ ಮಾಡಿದರೆ ಇನ್ನೊಬ್ಬರ ಜೀವನ ಉಳಿಸಬಹುದು. ಅಂದಾಗ ಮಾತ್ರ ನಾವು ಶ್ರೇಷ್ಠರಾಗಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.  

ನಗರದ ಸಂಗಮ್ ಸರ್ಕಲ್ ಬಳಿ ಮಂಗಳವಾರ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಮಂಟಪದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ರಕ್ತ ನಿಧಿ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲದ ಕಂಡು ಅದನ್ನು ದಾನಗಳಿಂದಲೇ ಪಡೆಯಬೇಕು. ಆದ್ದರಿಂದ ಸಮಾಜದಲ್ಲಿ  ಪ್ರತಿಯೊಬ್ಬ ಮನುಷ್ಯನು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಲು ಮುಂದೆ ಬಂದು ಸ್ವತಃ ರಕ್ತದಾನ ಮಾಡಬೇಕು ಎಂದರು.  

ಇದೇ ಸಂದರ್ಭದಲ್ಲಿ ಡಾ. ಮೃತ್ಯುಂಜಯ ಹರಿಹರ, ಕುಬೇರಗೌಡ ಸಣ್ಣಮನಿ, ಅಜಯ ಮಠದ, ಹಾವೇರಿ ಬ್ಲಡ್ ಬ್ಯಾಂಕಿನ ಮುಖ್ಯಸ್ಥ ಬಸವರಾಜ, ಯುವರಾಜ ಬಾರಾಟಕಿ, ಗಜಾನನ ಕಮಿಟಿ ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ