ಕಾಗವಾಡ

ರಸ್ತೆ, ಚರಂಡಿ ಕಾಮಗಾರಿಗೆ ಶೀತಲಗೌಡ ಚಾಲನೆ

ರಸ್ತೆ, ಚರಂಡಿ ಕಾಮಗಾರಿಗೆ ಶೀತಲಗೌಡ ಚಾಲನೆ

ಕಾಗವಾಡ 10: ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಇವರ ವಿಶೇಷ ಪ್ರಯತ್ನದಿಂದ ಉಗಾರ ಬುದ್ರುಕ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸುವ ಕಾಮಗಾರಿಗೆ ಸಚಿವರ ಅನುಪಸ್ಥಿತಿಯಲ್ಲಿ ಅಥಣಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ ಇವರು ಬುಧವಾರದಂದು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡುವಾಗ, ಗ್ರಾಮೀಣ ಹಾಗೂ ತೋಟದ ರಸ್ತೆಗಳು ಮತ್ತು ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಜವಳಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಖಾತೆ ಸಚಿವ ಶ್ರೀಮಂತ ಪಾಟೀಲರು ಹೆಚ್ಚಿನ ಒತ್ತು ನೀಡಿದ್ದಾರೆ. ಇದರಿಂದಾಗಿ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಹಲವಾರು ರಸ್ತೆಗಳು ಅಭಿವೃದ್ಧಿಗೊಂಡಿವೆ ಎಂದರು.

ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಅಭಿಯಂತರ ಆರ್.ಪಿ.ಅವತಾಡೆ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಚೌಗುಲೆ, ಮುಖಂಡರಾದ ವಿಜಯ ಶಿಂಧೆ, ಸಚಿವರ ಆಪ್ತ ಸಹಾಯಕ ವಿನಾಯಕ ಶಿಂಧೆ, ಮನೋಜ ಕುಸನಾಳೆ, ಜಿತೇಂದ್ರ ಶಿಂಧೆ, ಶಿವಾನಂದ ಮಾಲಗಾಂವೆ, ಅಣ್ಣಾ ಪಾಟೀಲ (ಗುಂಡವಾಡೆ)  ಅಮೀನ ಶೇಖ, ಸಂತೋಷ ಐಹೊಳೆ, ರಂಜಾನ ಶೇಖ, ನಜೀರ ಪಠಾಣ, ಲಕ್ಷ್ಮಣ ಜಾಧವ, ಸಂದೀಪ ಕಾಟಕರ, ರಾವಸಾಬ ಗಿಡ್ಡಸಕ್ಕನವರ, ದಾಧಾ ಚೌಧರಿ, ಅಪ್ಪಾಸಾಬ ಸನದಿ, ಉದಯ ಕಾಂಬಳೆ, ದಿಲಾವರ ನೇಜಕರ, ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ